ಚಿತ್ರದುರ್ಗ: ಮೊಳಕಾಲ್ಮೂರು ಬಿಜೆಪಿ ಟಿಕೆಟ್ ಬಂಡಾಯಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ತಿಪ್ಪೇಸ್ವಾಮಿಗೆ ಮಾತು ಕೊಟ್ಟು ಶ್ರೀರಾಮುಲು ಮೋಸ ಮಾಡಿದ್ರು ಎಂದು ತಿಪ್ಪೇಸ್ವಾಮಿ ಬೆಂಬಲಿಗರು ಆರೊಪಿಸಿದ್ದಾರೆ.ಈ ಹಿಂದೆ ಶ್ರೀರಾಮುಲು ಅವರು ಮೊಳಕಾಲ್ಮೂರಿಗೆ ನಾನಾಗಲೀ ಅಥವಾ ನನ್ನ ಕುಟುಂಬದವರಾಗಲಿ ಯಾರೂ ಬರಲ್ಲ. ತಿಪ್ಪೆಸ್ವಾಮಿ ಅವರೇ ಕ್ಯಾಂಡಿಡೇಟ್. ಅವರನ್ನ ಗೆಲ್ಲಿಸುವ ಜವಬ್ದಾರಿ ನಿಮ್ಮದು. ಫಸ್ಟ್ ಲಿಸ್ಟ್ ನಲ್ಲೇ ನಿಮಗೆ ಟಿಕೆಟ್ ಕೊಡಿಸುತ್ತೇನೆ. ಬೇರೆ ಯಾರ ಮಾತು ಕೇಳಬೇಡಿ ಎಂದು ತಿಪ್ಪೇಸ್ವಾಮಿಗೆ ಬೆಂಬಲಿಗರಿಗೆ ಮಾತುಕೊಟ್ಟಿದ್ದರು.ಅಂದು ತ್ವಿಪ್ಪೇಸ್ವಾಮಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಆಶ್ವಾನೆ ನೀಡಿದ್ದ ಶ್ರೀರಾಮುಲು ಇಂದು ವಿಧಾನಸಭಾ ಚುನಾವಣೆಗೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ತಾವೇ ನಿಂತಿದ್ದಾರೆ. ಇದರಿಂದ ತಿಪ್ಪೇಸ್ವಾಮಿ ಬೆಂಬಲಿಗರು ಶ್ರೀರಾಮುಲು ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ.ಅಂದು ತಿಪ್ಪೇಸ್ವಾಮಿ ಅವರಿಗೆ ಶ್ರೀರಾಮುಲು ವಾಗ್ದಾನ ನೀಡಿರುವ ವಿಡಿಯೋ ಈಗ ಪಬ್ಲಿಕ್ ಟಿವಿಗೆ ಲಭಿಸಿದೆ.Sign in to your account
Username or Email Address


Password

 Remember Me


