ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ಪಿಡಿಓ ಅನಂತ ಪದ್ಮನಾಭ್ ನಾಯಕ್ ಮಹಿಳಾ ಸಿಬ್ಬಂದಿಯ ಜೊತೆ ರಾಸಲೀಲೆ ನಡೆಸಿದ ದೃಶ್ಯಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.ಅನಂತ ಪದ್ಮನಾಭ ನಾಯಕ್ ಒಂದು ವರ್ಷದಿಂದ ನಾಲ್ಕೂರು ಗ್ರಾಮ ಪಂಚಾಯತ್ ನಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಕರ್ತವ್ಯದ ವೇಳೆ ಸರ್ಕಾರಿ ಕಚೇರಿಯಲ್ಲೆ ಕಾಮದಾಟ ನಡೆಸಿರುವುದು ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯತ್ ನಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಿವಾಹಿತ ಯುವತಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ.ಮಹಿಳಾ ಸಿಬ್ಬಂದಿಯ ಜೊತೆ ಅಸಭ್ಯ ವರ್ತನೆ ನಡೆಸಿರುವುದಲ್ಲದೇ ಕಾನೂನು ಬಾಹಿರ ಚಟುವಟಿಕೆ, ಭ್ರಷ್ಟಚಾರದಲ್ಲಿ ಭಾಗಿಯಾಗಿರುವ ಆರೋಪ ಕೂಡ ಈತನ ಮೇಲಿದೆ. ಮಾಜಿ ಮಿಲಿಟರಿ ಅಫೀಸರ್ ಅಗಿರುವ ಈತ ಸರ್ಕಾರಿ ಕಚೇರಿಯಲ್ಲಿ ಯುವತಿಯನ್ನು ಬಳಸಿಕೊಂಡಿರುವುದನ್ನು ಸಮತಾ ಸೈನಿಕ ದಳ ಖಂಡಿಸಿದೆ.ಪಿಡಿಓ ಅನಂತ ಪದ್ಮನಾಭ ನಾಯಕ್ ವಿರುದ್ಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದೆ. ಯುವತಿಯನ್ನು ಆತ್ಯಾಚಾರ ಹಾಗೂ ಕರ್ತವ್ಯ ಲೋಪ ನಡೆಸಿರುವುದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು, ಕೂಡಲೇ ಕೆಲಸದಿಂದ ವಜಾ ಮಾಡಬೇಕು ಅಂತ ಕುಂದಾಪುರದ ಸಮತಾ ಸೈನಿಕ ದಳ ಒತ್ತಾಯಿಸಿದೆ.Sign in to your account
Username or Email Address


Password

 Remember Me


