ಬೆಂಗಳೂರು: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿ ನಡೆದಿದೆ.ತಾಯಿ ರಾಧ(25), ಮಕ್ಕಳಾದ ಚಿನ್ಮಯಿ(4) ಮತ್ತು ಸಿಂಚನ(2) ಸಾವನ್ನಪ್ಪಿದವರು. ಬುಧವಾರ ಮಧ್ಯಾಹ್ನ ಮನೆಯಲ್ಲಿ ರಾಧ ಇಬ್ಬರು ಪುಟಾಣಿ ಮಕ್ಕಳಿಗೆ ನೇಣು ಹಾಕಿ, ನಂತರ ತಾನೂ ಕೂಡ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಆತ್ಮಹತ್ಯೆಗೂ ಮುಂಚೆ ಮನೆಯ ಗೋಡೆ ಮೇಲೆ ಪತಿಗಾಗಿ `ಐ ಮಿಸ್ ಯು ರೀ’ ಎಂದು ರಾಧ ಬರದಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತಿ ಶ್ರೀನಿವಾಸ್ ನನ್ನ ವಶಕ್ಕೆ ಪಡೆಕೊಂಡು ಕೌಟುಂಬಿಕ ಕಲಹದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.ಇನ್ನು ಘಟನೆ ಬಗ್ಗೆ ತಿಳಿದು ಆಸ್ಪತ್ರೆ ಬಳಿ ಬಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.Sign in to your account
Username or Email Address


Password

 Remember Me


