ಬೆಳಗಾವಿ: ಚುನಾವಣೆಯಲ್ಲಿ ಗೆದ್ದರೆ ಭ್ರಷ್ಟಾಚಾರ, ಅಕ್ರಮ ಮಟ್ಟ ಹಾಕ್ತೀನಿ ಅಂತ ಮತದಾರರಿಗೆ ಭರವಸೆ ಕೊಡೋದು ಸಾಮಾನ್ಯ. ಆದ್ರೆ ಇಲ್ಲೊಬ್ಬರು ಟಿಕೆಟ್ ಆಕಾಂಕ್ಷಿ ನಾನೇನಾದ್ರೂ ಗೆದ್ದರೆ ಅಕ್ರಮಕ್ಕೆ ಬೆಂಬಲ ನೀಡುತ್ತೇನೆಂದು ಬಹಿರಂಗವಾಗಿ ಹೇಳಿದ್ದಾರೆ.ಹೌದು. ಬೆಳಗಾವಿ ಜಿಲ್ಲೆಯ ಯಮನಕರಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾರುತಿ ಅಷ್ಟಗಿ ಈ ಆಶ್ವಾಸನೆ ನೀಡಿದ್ದಾರೆ. ನನ್ನನ್ನು ಶಾಸಕರ ಚುನಾವಣೆಯಲ್ಲಿ ಗೆಲ್ಲಿಸಿದ್ರೆ 24 ಗಂಟೆಯಲ್ಲಿ ಅಕ್ರಮ ಮರಳು ದಂಧೆಗೆ ಅವಕಾಶ ಮಾಡಿಕೊಡ್ತೀನಿ ಅಂತ ಮಾತುಕೊಟ್ಟಿದ್ದಾರೆ. ಟಿಕೆಟ್ ಆಕಾಂಕ್ಷಿಯ ಈ ಮಾತು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಈ ಮೂಲಕ ವೋಟಿಗಾಗಿ ಘಟಪ್ರಭಾ ನದಿಯ ಒಡಲು ಬಗೆಯೋರ ಬೆನ್ನಿಗೆ ನಿಂತಿದ್ದಾರೆ. ಕಳೆದ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ಮಾರುತಿ ಅಷ್ಟಗಿ ಸತೀಶ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು.Sign in to your account
Username or Email Address


Password

 Remember Me


