ಬೆಂಗಳೂರು: ಅಕ್ಷಯ ತೃತೀಯ ಹತ್ತಿರ ಬರುತ್ತಿದೆ. ಈ ಬಾರಿ ಮಹಿಳಾ ಮತದಾರರನ್ನು ಸೆಳೆಯಲು ರಾಜಕೀಯ ನಾಯಕರಿಗೆ ಹೊಸ ಅಸ್ತ್ರ ಸಿಕ್ಕಿದಂತಾಗಿದೆ.ಬಂಗಾರದ ಹಬ್ಬಕ್ಕೆ ಚಿನ್ನ ಮನೆಗೆ ಬಂದ್ರೆ ಮಹಿಳೆಯರನ್ನು ಹಿಡಿಯೋಕ್ಕೆ ಆಗುತ್ತಾ? ಇದನ್ನೇ ಎನ್‍ಕ್ಯಾಶ್ ಮಾಡಿಕೊಂಡು ಈ ಬಾರಿ ಅಕ್ಷಯ ತೃತೀಯಗೆ ಮಹಿಳಾ ಮತದಾರರಿಗಾಗಿ ಬಂಗಾರದ ಗಿಫ್ಟ್ ಗಳನ್ನು ಕೆಲ ರಾಜಕೀಯ ನಾಯಕರು ಮಾಡಿಕೊಂಡಿದ್ದಾರಂತೆ.ಏಪ್ರಿಲ್ 18 ರಂದು ಅಕ್ಷಯ ತೃತೀಯವಾಗಿದ್ದು, ಚಿನ್ನದ ವ್ಯಾಪಾರಿಗಳ ನಿರೀಕ್ಷೆಗೂ ಮೀರಿ ಈ ಬಾರಿ ವ್ಯಾಪಾರ ವೃದ್ಧಿಯಾಗುವ ಲಕ್ಷಣ ಕಾಣುತ್ತಿದೆ. ಈಗಾಗಲೇ ಬಂಗಾರದ ಬುಕ್ಕಿಂಗ್ ಜೋರಾಗಿದ್ಯಯಂತೆ. ಹಾಗೆ ನೋಡಿದ್ರೇ ಕಳೆದ ವರ್ಷಕ್ಕಿಂತ ಈ ಬಾರಿ ಚಿನ್ನದ ದರ ಏರಿಕೆ ಕಂಡಿದೆ. ಆದ್ರೇ ವ್ಯಾಪಾರಕ್ಕೆ ನೋ ಪ್ರಾಬ್ಲಂ, ರಾಜಕೀಯ ನಾಯಕರು, ಅವರ ಬೆಂಬಲಿಗರೇ ಹೆಚ್ಚಾಗಿ ಚಿನ್ನದ ಖರೀದಿಯಲ್ಲಿ ತೊಡಗಿದ್ದಾರೆ ಅನ್ನೋದು ಚಿನ್ನದಂಗಡಿ ಮಾಲೀಕರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.Sign in to your account
Username or Email Address


Password

 Remember Me


