ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮದ ಮಾರಮ್ಮ ದೇವಿ ಜಾತ್ರೆಯಲ್ಲಿ ಕೊಂಡ ಹಾಯುವ ವೇಳೆ ಅರ್ಚಕರು ಬಿದ್ದಿದ್ದಾರೆ.ರವಿ ಪೂಜಾರಿ ಕೊಂಡದಲ್ಲಿಯೇ ಬಿದ್ದ ಅರ್ಚಕ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೊಂಡದಲ್ಲಿ ಓಡಿ ಬರುತ್ತಿರುವಾಗ ರವಿ ಅಲ್ಲಿಯೇ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರೆಲ್ಲಾ ರವಿ ಅವರನ್ನು ಮೇಲೆಕ್ಕೆತ್ತಿದ್ದಾರೆ. ರವಿ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಒಂದು ತಿಂಗಳ ಹಿಂದೆ ಸಾತನೂರಿನ ಮಾರಮ್ಮದೇವಿ ಜಾತ್ರೆಯಲ್ಲಿಯೂ ಅಗ್ನಿಕೊಂಡ ಹಾಯಲು ಮುಂದಾದ ವ್ಯಕ್ತಿ ಬಿದ್ದು ಗಾಯಗೊಂಡಿದ್ದರು. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.https://youtu.be/kuyfjS55nPISign in to your account
Username or Email Address


Password

 Remember Me


