ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಡೇ ಸಾಥ್ ಶನಿ ಕಾಟ. ಹೀಗಾಗಿ ಶನಿ ದೆಸೆಯಿಂದ್ಲೇ ಸಿಎಂ ಆಗಿದ್ದ ಸಿದ್ದರಾಮಯ್ಯ ಈಗ ಶನಿ ಕಾಟದಿಂದ್ಲೇ ಸೋಲ್ತಾರೆ ಅಂತ ಜೆಡಿಎಸ್ ಎಂಎಲ್‍ಸಿ ಶರವಣ ಭವಿಷ್ಯ ನುಡಿದಿದ್ದಾರೆ.ಮಧುಗಿರಿಯಲ್ಲಿ ಮಾತಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಶನಿ ದೆಸೆ ಶುರುವಾಗಿತ್ತು. ಇದೀಗ ಅವರಿಗೆ ಏಳೂವರೆ ಶನಿಕಾಟ ನಡೀತಿದೆ. ಹೀಗಾಗಿ ಶನಿಯೇ ಸಿಎಂ ಬಾಯಲ್ಲಿ ದುರಹಂಕಾರದ ಮಾತುಗಳನ್ನಾಡಿಸ್ತಿದ್ದಾನೆ. ಸಿಎಂಗೆ ಜನರೇ ಸೋಲಿನ ಭಾಗ್ಯ ಕೊಡ್ತಾರೆ. ಬಾದಾಮಿಗೆ ಹೋಗಿ ಸ್ಪರ್ಧಿಸಿದ್ರೂ ಜನರೇ ತಕ್ಕಪಾಠ ಕಲಿಸ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ, ಎಚ್‍ಡಿಕೆಯನ್ನು ಸೋಲಿಸಲು ನಾನು ಒಂದು ದಿನ ಪ್ರಚಾರ ಮಾಡಿದ್ರೆ ಸಾಕು: ಸಿಎಂನಮ್ಮ ವರಿಷ್ಠರನ್ನು ಎಳೆಯುತ್ತಿರುವಂತದ್ದು ಹಾಗೂ ಕುಮಾರಣ್ಣನ ಬಗ್ಗೆ ಮಾತನಾಡಿದಾಗ ನಿಮ್ಮಪ್ಪನಾಣೆ, ನಿಮ್ಮಪ್ಪನಾಣೆ ಅಂತ ಹೇಳುವುದನ್ನು ನಿಲ್ಲಿಸಬೇಕು. ನಿಮಗೆ ಏನಾದ್ರೂ ಸಂಸ್ಕೃತಿ ಇದ್ದರೆ, ನಿಮ್ಮ ರಾಜಕೀಯ ಗುರು ದೇವೇಗೌಡರು. ನೀವು ಯಾರ ಗರಡಿಯಲ್ಲಿ ಬೆಳೆದಿದ್ದೀರಾ ಸ್ವಾಮಿ? ಎಲ್ಲಿಂದ ಬಂದ್ರಿ? ಇಂತಹ ದುರಹಂಕರಾದ ಮಾತುಗಳನ್ನು ನೀವು ಬಿಡಬೇಕು ಅಂತ ಸಿಎಂ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಿಎಂ ಆಗಿರೋವಾಗ ಅವರು ಉಲ್ಲಂಘಿಸಿರಬೇಕು : ಎಚ್‍ಡಿಡಿಗೆ ಸಿಎಂ ತಿರುಗೇಟುಗುರುಗಳು ದೇವರಿಗೆ ಸಮಾನ. ನಿಮ್ಮ ರಾಜಕೀಯ ಗುರುಗಳವರು. ನಿಮ್ಮ ಸಂಸ್ಕೃತಿಯೇನು? ಇಂದು ನೀವು ಮಾತನಾಡುತ್ತಿರುವ ಸಂಸ್ಕೃತಿಯೇನು? ಎಂಬುದನ್ನು ಹೇಳಬೇಕಾಗುತ್ತದೆ ಅಂತ ಗರಂ ಆದ್ರು.Sign in to your account
Username or Email Address


Password

 Remember Me


