ಚಿಕ್ಕಬಳ್ಳಾಪುರ: ತೆಲುಗು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಯೊಬ್ಬರು ಸಿನಿಮಾ ಸ್ಟೈಲಲ್ಲಿ ಪವರ್ ಫುಲ್ ಡೈಲಾಗ್ ಹೇಳುತ್ತಾ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ಪ್ರಬಲ ಪಕ್ಷೇತರ ಅಭ್ಯರ್ಥಿಗಳನ್ನು ನಾನು ಸೋಲಿಸಿ ಎಂಎಲ್‍ಎ ಆಗುತ್ತೇನೆ ಅಂತಾ ಹೇಳುತ್ತಿದ್ದಾರೆ.ಜಿಲ್ಲೆಯ ಚಿಂತಾಮಣಿ ತಾಲೂಕು ಅಂಕಾಲಮಡುಗು ಗ್ರಾಮದ ಭಾಸ್ಕರ್ ರೆಡ್ಡಿ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಚಿಂತಾಮಣಿ ಕ್ಷೇತ್ರದ ಎಲ್ಲ ಅಭ್ಯರ್ಥಿಗಳನ್ನು ಸೋಲಿಸುತ್ತೇನೆ ಅಂತಾ ಸವಾಲು ಹಾಕುತ್ತಾರೆ. ಇದೇ ಏಪ್ರಿಲ್ 17ರಂದು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದು, ಚಿಂತಾಮಣಿಯಲ್ಲಿ ಈ ಬಾರಿ ನನ್ನದೇ ಗೆಲುವು ಎಂದು ಆತ್ಮವಿಶ್ವಾಸ ವ್ಯಕ್ತಪಡಿಸ್ತಾರೆ.ಭಾಸ್ಕರ್ ರೆಡ್ಡಿ ತಿರುಪತಿ ತಿಮ್ಮಪ್ಪ, ಧರ್ಮಸ್ಥಳದ ಮಂಜುನಾಥಸ್ವಾಮಿಯ ಭಕ್ತ ಎಂದು ಹೇಳಿಕೊಳ್ಳುತ್ತಿದ್ದಾರೆ. ಚುನಾವಣೆಗೆ ನಿಲ್ಲೋಕೆ ಅಂತಲೇ ಯುಗಾದಿ ಹಬ್ಬದಿಂದ ಊಟ ಬಿಟ್ಟು ಬರೀ ಹಣ್ಣು-ಹಂಪಲು, ಹಾಲು ಸೇವಿಸಿ ಬದುಕುತ್ತಿದ್ದಾರೆ. ಹೊಸ ವರ್ಷ ಆರಂಭದಿಂದಲೇ ಈ ಬಾರಿ ಚುನಾವಣೆಗೆ ನಿಲುತ್ತೀನಿ ಎಂದು ಮದ್ಯಪಾನ, ಮಾಂಸಾಹಾರ ಬಿಟ್ಟು ಗಾಂಧಿತತ್ವ ಪಾಲಿಸುತ್ತಿದ್ದಾರೆ. ಭಾಸ್ಕರ್ ರೆಡ್ಡಿ ಒಂದು ರೀತಿಯಲ್ಲಿ ಡಿಫೆರೆಂಟ್ ಹೇಳಿಕೆ ಕೊಡುತ್ತಿದ್ದು, ಸಸಿಗಳನ್ನ ನೆಟ್ಟು, ಅಂಗಾಗ ಹಾಗೂ ದೇಹ ದಾನ ಮಾಡುವ ಮೂಲಕ ನಾಮಪತ್ರ ಸಲ್ಲಿಸುವುದಾಗಿ ಎಂದು ತಿಳಿಸಿದ್ದಾರೆ.ಚಿಂತಾಮಣಿ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಅಭ್ಯರ್ಥಿಗಳು, ಜನ ವಿರೋಧಿ, ಭ್ರಷ್ಟಚಾರ ನಡೆಸಿದ್ದಾರೆ ಎಂದು ಭಾಸ್ಕರ್ ರೆಡ್ಡಿ ಆರೋಪಿಸಿದ್ದಾರೆ.Sign in to your account
Username or Email Address


Password

 Remember Me


