ಬೆಂಗಳೂರು: ಡಿಪ್ಲೊಮಾ ವಿದ್ಯಾರ್ಥಿಗಳು 50,000 ರೂ. ಬೆಲೆ ಬಾಳುವ ನಾಯಿಯನ್ನು ಕದ್ದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ವಿಘ್ನೇಶ್ವರನಗರದಲ್ಲಿ ನಡೆದಿದೆ.ಅರುಣ್ ಹಾಗೂ ಗಿರೀಶ್ ನಾಯಿ ಕಳ್ಳತನ ಮಾಡಿದ ಬಂಧಿತರು. ಮೂರ್ತಿ ಎಂಬುವವರ ಮನೆಯಲ್ಲಿ ವಿದ್ಯಾರ್ಥಿಗಳು ನಾಯಿಯನ್ನು ಕಳ್ಳತನ ಮಾಡಿದ್ದು, ಆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಬೀಗಲ್ ತಳಿ ನಾಯಿ ಸುಮಾರು 50 ಸಾವಿರ ಬೆಲೆಬಾಳುವ ನಾಯಿಯಾಗಿದ್ದು, ಮೂರ್ತಿ ಕುಟುಂಬದವರು ಶನಿವಾರ ಬೆಳಗ್ಗೆ ಬೀಗಲ್ ಎಂಬ ನಾಯಿಯನ್ನು ಸ್ನಾನ ಮಾಡಿಸಿ ಹೊರಗೆ ಕಟ್ಟಿಹಾಕಿದ್ದರು. ಮನೆ ಹೊರಗೆ ಕಟ್ಟಿ ಹಾಕಿದ್ದನ್ನು ಗಮನಿಸಿದ ವಿದ್ಯಾರ್ಥಿಗಳು ಬೈಕಿನಲ್ಲಿ ಬಂದು ಕಳ್ಳತನ ಮಾಡಿದ್ದಾರೆ. ಮೂರ್ತಿ ಒಂದು ವರ್ಷ ಹಿಂದೆ ನಾಯಿಯನ್ನು ಖರೀದಿ ಮಾಡಿದ್ದರು. ಈಗ ನಾಯಿ ಕಳ್ಳತನವಾಗಿದ್ದು, ಮೂರ್ತಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸರು ಒಂದು ಗಂಟೆಯಲ್ಲಿ ಸಿಸಿಟಿವಿ ಆಧಾರದ ಮೇಲೆ ನಾಯಿ ಕಳ್ಳರನ್ನು ಬಂಧಿಸಿದ್ದಾರೆ.Sign in to your account
Username or Email Address


Password

 Remember Me


