ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯೊಂದು ರಾಜಕೀಯ ವಲಯದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿರುವ ಎಸ್.ಎಂ.ಕೃಷ್ಣ ನಾನು ಬಿಜೆಪಿ ತೊರೆಯಲ್ಲ ಅಂತಾ ಹೇಳಿದ್ದಾರೆ.ಯಾವುದೇ ಕಾರಣಕ್ಕೂ ಈಗಿರುವ ಪಕ್ಷ ಬಿಡುವುದೂ ಇಲ್ಲ. ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷವನ್ನು ಸೇರುವುದು ಇಲ್ಲ. ನಾನು ಒಂದು ವರ್ಷದ ಹಿಂದೆಯೇ ಬಿಜೆಪಿ ಸೇರಿಕೊಂಡಿದ್ದೇನೆ. ಚುನಾವಣಾ ಸನಿಹದಲ್ಲಿ ಈ ರೀತಿಯ ವದಂತಿಗಳು ಹರಡುತ್ತಿರುತ್ತವೆ ಅಂತಾ ತಿಳಿಸಿದ್ದಾರೆ.ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚಾಗಿದ್ದು, ಬಿಜೆಪಿ ಸೇರಿದ್ದ ಎಸ್.ಎಂ.ಕೃಷ್ಣ ಉದ್ದೇಶಪೂರ್ವಕವಾಗಿಯೇ ಪ್ರಚಾರದಿಂದ ದೂರ ಉಳಿದಿದ್ದಾರೆ ಅಂತಾ ಹೇಳಲಾಗುತ್ತಿತ್ತು. ಆದ್ರೆ ಎಸ್.ಎಂ.ಕೃಷ್ಣ ಸದ್ಯ ಮುಂಬೈ ನಲ್ಲಿದ್ದು, ಮುಂದಿನ ದಿನಗಳಲ್ಲಿ ಚುನಾವಣಾ ಕೆಲಸಗಳಲ್ಲಿ ಸಕ್ರಿಯರಾಗಲಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.Sign in to your account
Username or Email Address


Password

 Remember Me


