ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಂದರೆ ಎಲ್ಲರಿಗೂ ಇಷ್ಟ. ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಲಾಂಗ್ ಹಿಡಿದು ಮಾಸ್ ಆಡಿಯನ್ಸ್ ನ ರಂಜಿಸುವ ಶಿವಣ್ಣ, ಕ್ಲಾಸ್ ಆಡಿಯನ್ಸ್ ಗೂ ಅಷ್ಟೇ ಅಚ್ಚುಮೆಚ್ಚು. ಸ್ಯಾಂಡಲ್ ವುಡ್ ನಲ್ಲಿ ಸೆಂಚುರಿ ಬಾರಿಸಿರುವ ಶಿವಣ್ಣನಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅಂತಹ ಶಿವಣ್ಣ ಅವರು ಒಬ್ಬರ ಮಹಾನ್ ಫ್ಯಾನ್ ಆಗಿದ್ದಾರೆ.ಹೌದು. ಶಿವರಾಜ್ ಕುಮಾರ್ ಅವರು ಸಕಲ ಕಲಾವಲ್ಲಭ ಕಮಲ್ ಹಾಸನ್ ಅವರ ಅಭಿಮಾನಿಯಾಗಿದ್ದಾರೆ. ಶಿವಣ್ಣ ಅವರು ಕಮಲ್ ಹಾಸನ್ ರವರ ಎಲ್ಲ ಚಿತ್ರಗಳನ್ನೂ ಮಿಸ್ ಮಾಡದೆ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದರು. ತಮ್ಮ ಅಚ್ಚುಮೆಚ್ಚಿನ ನಟ ಕಮಲ್ ಹಾಸನ್ ರನ್ನ ಒಮ್ಮೆ ಭೇಟಿ ಆಗಿ ತಬ್ಬಿಕೊಂಡ ಮೇಲೆ, ಮೂರು ದಿನ ಸ್ನಾನ ಮಾಡಿರಲಿಲ್ಲ ಎಂದು ಸ್ವತಃ ಶಿವಣ್ಣ ಅವರೇ `ನಂ.1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.ಶಿವಣ್ಣ ಕಮಲ್ ಹಾಸನ್ ಅವರ ಸಿನಿಮಾಗಳನ್ನ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದೆ. ಓಪನಿಂಗ್ ಡೇ ಅವರ ಆಫೀಸ್ ಗೆ ಫೋನ್ ಮಾಡಿ, ರಾಜ್ ಕುಮಾರ್ ಮನೆಗೆ ಟಿಕೆಟ್ ಬೇಕು ಅಂತ ಸುಳ್ಳು ಹೇಳಿ ಹದಿನೈದು ಟಿಕೆಟ್ ತರಿಸಿಕೊಂಡು ಸಿನಿಮಾ ನೋಡುತ್ತಿದ್ದೆ. ಆಗ ನನಗಿನ್ನೂ 14-15 ವರ್ಷ ಇರಬಹುದು ಎಂದು ಹೇಳಿಕೊಂಡಿದ್ದಾರೆ.






 Advertisement 




Sign in to your account
Username or Email Address


Password

 Remember Me


