ತುಮಕೂರು: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಅಪಘಾತದ ತೀವ್ರತೆ ಎರಡು ವಾಹನ ಧಗಧಗನೆ ಉರಿದು ಸಂಪೂರ್ಣ ಭಸ್ಮವಾದ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ಬರಕನಾಳ್ ಗೇಟ್ ಬಳಿ ನಡೆದಿದೆ.ರಂಗಸ್ವಾಮಿ(20) ಸಾವನಪ್ಪಿದ್ದ ಬೈಕ್ ಸವಾರ. ಹುಳಿಯಾರಿನಿಂದ ಚಿಕ್ಕನಾಯ್ಕನಹಳ್ಳಿಯತ್ತ ಬರುತ್ತಿದ್ದ ಬಸ್ ಹಾಗೂ ಚಿಕ್ಕನಾಯಕನಹಳ್ಳಿಯಿಂದ ಹುಳಿಯಾರ ಕಡೆಗೆ ಸಾಗುತಿದ್ದ ಬೈಕ್ ನಡುವೆ ಬರಕನಾಳ ಗೇಟ್ ಬಳಿ ಮುಖಾಮುಖಿ ಡಿಕ್ಕಿಯಾಗಿದೆ.ಡಿಕ್ಕಿಯ ಹೊಡೆದ ರಭಸಕ್ಕೆ ಬೈಕ್ 100 ಮೀಟರ್ ದೂರ ಎಳೆದುಕೊಂಡು ಹೋಗಿದೆ. ಈ ವೇಳೆ ಬೈಕಿನಿಂದ ಪೆಟ್ರೋಲ್ ರಸ್ತೆಗೆ ಚೆಲ್ಲಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ನಂತರ ಬೆಂಕಿ ಬಸ್ಸಿಗೂ ಹೊತ್ತಿಕೊಂಡಿದೆ. ಬೈಕ್ ಸಂಪೂರ್ಣ ಭಸ್ಮವಾದರೆ, ಬಸ್ ಭಾಗಶಃ ಸುಟ್ಟುಹೋಗಿದ್ದು ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದೆ.ಈ ಸಂಬಂಧ ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


