ಬೆಂಗಳೂರು: ದೆಹಲಿಯಲ್ಲಿ ಕಾಂಗ್ರೆಸ್ ಟಿಕೆಟ್ ಸ್ಕ್ರೀನಿಂಗ್ ನಡೆಯುತ್ತಿದ್ದರೆ ಇತ್ತ ಅಂಬರೀಶ್ ಮಾತ್ರ ಯಾವುದೇ ಟೆನ್ಶನ್ ಇಲ್ಲದೇ `ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ.ನಾನು ಡೆಲ್ಲಿಗೂ ಹೋಗಲ್ಲ, ಎಲ್ಲಿಗೂ ಹೋಗಲ್ಲ. ಟೆಕೆಟ್ ಕೊಟ್ರೆ ಕೊಡ್ಲಿ, ಕೊಡದಿದ್ದರೆ ಇಲ್ಲ ಎಂದಿದ್ದಾರೆ. ಕಳೆದ ರಾತ್ರಿ ಸಿಎಂ ಸಿದ್ದರಾಮಯ್ಯ ದೂರವಾಣಿ ಮೂಲಕ ಅಂಬರೀಶ್ ಜೊತೆ ಮಾತುಕತೆ ನಡೆಸಿ, ಎಲೆಕ್ಷನ್‍ಗೆ ನೀನೇ ನಿಲ್ಲಪ್ಪಾ ಇಲ್ಲಾಂದ್ರೆ ಪರ್ಯಾಯ ಅಭ್ಯರ್ಥಿಯನ್ನೂ ಸೂಚಿಸಪ್ಪಾ ಅಂತ ಕೇಳಿದ್ದಾರೆ. ಇದಕ್ಕೆ ಅಂಬರೀಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.ಮಂಡ್ಯ ಅಭ್ಯರ್ಥಿ ಬಗ್ಗೆ ಗುಪ್ತಚರ ಇಲಾಖೆಯಿಂದ ಸಿಎಂ ಮಾಹಿತಿ ಕೇಳಿದ್ದು, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಹೆಚ್ಚಾಗಿದೆ ಎನ್ನಲಾಗಿದೆ.ಕಾಂಗ್ರೆಸ್ ಅಭ್ಯರ್ಥಿಗಳ ಭವಿಷ್ಯ ಬಹುತೇಕ ಇಂದೇ ನಿರ್ಧಾರವಾಗಲಿದೆ. ಅಭ್ಯರ್ಥಿಗಳ ಆಯ್ಕೆಗೆ ಪರಿಗಣಿಸಬೇಕಾದ ಮಾನದಂಡಗಳ ಬಗ್ಗೆ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಸಮೀಕ್ಷೆಯಲ್ಲಿ ವ್ಯತಿರಿಕ್ತ ವರದಿ ಬಂದಿರುವವರಿಗೆ ಟಿಕೆಟ್ ನಿರಾಕರಣೆ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ.Sign in to your account
Username or Email Address


Password

 Remember Me


