ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗ ಶ್ವಾನಗಳ ಅಬ್ಬರ ಜೋರಾಗಿದ್ದು, ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ಶ್ವಾನವೊಂದು ತಾನು ಮಾಡಿದ ಪಾತ್ರಕ್ಕೆ ಡಬ್ ಮಾಡಿದೆ.ಇದು ಅಕ್ಕಪಕ್ಕದ ಇಂಡಸ್ಟ್ರಿಯಲ್ಲಿ ಆದ ಮಿರಾಕಲ್ ಅಲ್ಲ. ನಮ್ಮ ಸ್ಯಾಂಡಲ್‍ವುಡ್ ಇಂಡಸ್ಟ್ರಿಯಲ್ಲಿ ಆಗಿದೆ. ಸಿನಿಮಾಗಳಲ್ಲಿ ಶ್ವಾನಗಳು ನಟಿಸುವುದು ಸಾಮಾನ್ಯವಾಗಿದೆ. ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ ಹಾಗೂ ಸಂಯುಕ್ತ ಹೊರನಾಡು ನಟನೆಯ `ನಾನು ಮತ್ತು ಗುಂಡ’ ಸಿನಿಮಾದಲ್ಲಿ ಸಿಂಬಾ ಹೆಸರಿನ ಶ್ವಾನ ನಟನೆ ಮಾಡುವುದು ಮಾತ್ರವಲ್ಲದೆ ತನ್ನ ಪಾತ್ರಕ್ಕೆ ತಾನೇ ಡಬ್ ಮಾಡಿದೆ.`ನಾನು ಮತ್ತು ಗುಂಡ’ ಸಿನಿಮಾದಲ್ಲಿ ನಟಿಸಿರುವ ಶ್ವಾನ ಮೈಕ್ ಮುಂದೆ ನಿಂತು ಡಬ್ಬಿಂಗ್ ಮಾಡುತ್ತಿರುವ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಚಿತ್ರದಲ್ಲಿ ಶ್ವಾನ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದೆ. ಚಿತ್ರದ ಪೂರ್ತಿ ಈ ನಾಯಿ ನಾಯಕನ ಜೊತೆಯಲ್ಲಿಯೇ ಇರುತ್ತದೆ. ಈ ಚಿತ್ರದಲ್ಲಿ ಸ್ಯಾಮ್, ಗುಂಡ ಹಾಗೂ ಸಿಂಬಾ ಎನ್ನುವ ಮೂರು ಶ್ವಾನಗಳನ್ನ ಬಳಕೆ ಮಾಡಿಕೊಳ್ಳಲಾಗಿದೆ.ಖ್ಯಾತ ಚಿತ್ರಸಾಹಿತಿ ಕಮ್ ನಿರ್ದೇಶಕ ರಘುಹಾಸನ್ ನಿರ್ಮಾಣದಲ್ಲಿ ಶ್ರೀ ನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ. ಸಂಭಾಷಣೆ ಶರತ್ ಚಕ್ರವರ್ತಿ ನೀಡಿದ್ದಾರೆ. ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಗತಿಯಲ್ಲಿದೆ. ಚುನಾವಣೆ ಮುಗಿದ ನಂತರ ನಾನು ಮತ್ತು ಗುಂಡ ಚಿತ್ರತಂಡ ಸಿನಿಮಾವನ್ನ ಬಿಡುಗಡೆ ಮಾಡುವ ಯೋಚನೆಯನ್ನು ಮಾಡಿದೆ.






 Advertisement 




Sign in to your account
Username or Email Address


Password

 Remember Me


