ಮಂಗಳೂರು: ಇನ್ನೋವಾ ಮತ್ತು ಓಮ್ನಿ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ತಾಯಿ-ಮಗ ಇಬ್ಬರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ನೆಲ್ಲಿಕಾರು ಎಂಬಲ್ಲಿ ನಡೆದಿದೆ.ತೀರ್ಥಹಳ್ಳಿ ಮೂಲದ ಸೋಮಶೇಖರ್(45) ಹಾಗೂ ತಾಯಿ ರತ್ನಮ್ಮ(70) ಮೃತ ದುರ್ದೈವಿಗಳು. ಪ್ರವಾಸ ನಿಮಿತ್ತ ಓಮ್ನಿ ಕಾರಿನಲ್ಲಿ ಕುಟುಂಬದವರು ತೀರ್ಥಹಳ್ಳಿಯಿಂದ ಮಂಗಳೂರು ಕಡೆಗೆ ಬರುತ್ತಿತ್ತು. ಇವರ ವಿರುದ್ಧ ದಿಕ್ಕಿನಿಂದ ಇನ್ನೋವಾ ಬರುತ್ತಿತ್ತು. ಈ ವೇಳೆ ಮೂಡಬಿದ್ರೆಯ ನೆಲ್ಲಿಕಾರು ಬಳಿ ವೇಗವಾಗಿ ಬಂದು ಎರಡು ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ತಾಯಿ ಮಗ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಇನ್ನು ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಸಮೀಪದ ಮೂಡಬಿದ್ರೆ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮೂಡಬಿದ್ರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.


 Advertisement 




 Advertisement 






 Advertisement 




Sign in to your account
Username or Email Address


Password

 Remember Me


