ಬೆಳಗಾವಿ: ಕೆರೆಯಲ್ಲಿ ಈಜಲು ಹೋಗಿ ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ನಡೆದಿದೆ.ಮಣ್ಣೂರ ಗ್ರಾಮದ ಕುಷಾಲ ಕಲ್ಲಪ್ಪ ಚೌಗಲೆ(12), ಆಕಾಶ ಕಲ್ಲಪ್ಪ ಚೌಗಕೆ (15) ಮತ್ತು ಸಾಹೀಲ್ ಮನೊಹರ ಬಾಳೆಕುಂದ್ರಿ (13) ಮೃತ ದುರ್ದೈವಿಗಳು. ಈ ಮೂವರು ಮಕ್ಕಳು ಅಕ್ಕಪಕ್ಕದ ಮನೆಯವರಾಗಿದ್ದಾರೆ.ಭಾನುವಾರ ಶಾಲೆಗೆ ರಜಾ ಇದ್ದ ಕಾರಣ ಊರಿನ ಮುಂದೆ ಹೊಂಡದಂತೆ ಇರುವ ಕೆರೆಯಲ್ಲಿ ಈಜು ಬಾರದೇ ಇದ್ದರೂ ಸಹ ಮೂವರು ಮಕ್ಕಳು ಸೇರಿ ಪ್ಲಾಸ್ಟಿಕ್ ಡಬ್ಬಿಗಳನ್ನು ತೆಗೆದುಕೊಂಡು ಈಜು ಕಲಿಯಲೆಂದು ಹೊಗಿದ್ದರು. ಆದರೆ ಮಕ್ಕಳು ಮಾತ್ರ ಆ ಪ್ಲಾಸ್ಟಿಕ್ ಡಬ್ಬಿಯನ್ನು ಬಳಸದೆ ನೀರಿನಲ್ಲಿ ಇಳಿದಿದ್ದಾರೆ. ಹೀಗಾಗಿ ಮೂವರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.Sign in to your account
Username or Email Address


Password

 Remember Me


