ಚಾಮರಾಜನಗರ: ಜನರಲ್ಲಿ ವಿಧಾನಸಭಾ ಚುನಾವಣೆಯ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಅಧಿಕಾರಿಗಳು ಚಾಮರಾಜನಗರದಲ್ಲಿ ಎಡವಟ್ಟೊಂದು ಮಾಡಿದ್ದಾರೆ.ಚಾಮರಾಜನಗರದಲ್ಲಿ 2014 ನೇ ಸಾಲಿನಲ್ಲಿ ನಡೆದ ಲೋಕಸಭಾ ಚುನಾವಣೆಯ ಪೋಸ್ಟರ್‍ಗಳನ್ನು ಬಳಸಿ ಕಡ್ಡಾಯ ಮತದಾನ ಮಾಡಿ ಎಂದು ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಅಬ್ದುಲ್ ಕಲಾಂ ಅವರು ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಆ ವೇಳೆ ಅಬ್ದುಲ್ ಕಲಾಂರ ಭಾವಚಿತ್ರದೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಭಾಗಿ ಆಗುವಂತೆ ಕೋರಲಾಗಿದ್ದ ಪೋಸ್ಟರ್ ಗಳು ಚಾಮರಾಜನಗರದಲ್ಲಿ ರಾರಾಜಿಸುತ್ತಿವೆ.ಈ ಬಾರಿಯ ವಿಧಾನಸಭಾ ಚುನಾವಣೆಯ ಬಗ್ಗೆ ಜನರಲ್ಲಿ ಮತದಾನ ಜಾಗೃತಿ ಮೂಡಿಸಲು ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಿಕೊಂಡಿದೆ. ಹೀಗಾಗಿ ಎಲ್ಲಾ ಜಿಲ್ಲೆಗಳಲ್ಲೂ ದ್ರಾವಿಡ್ ಅವರ ಭಾವ ಚಿತ್ರವನ್ನು ಹಾಕಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಚುನಾವಣಾ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.Sign in to your account
Username or Email Address


Password

 Remember Me


