ಮಂಗಳೂರು: ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯುಟಿ ಖಾದರ್ ಅವರಿಗೆ ಮುಸ್ಲಿಂ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ಶನಿವಾರ ಸಂಜೆ ಎಸ್‍ಕೆಎಸ್‍ಎಸ್‍ಎಫ್ ಸಮಸ್ತ ಸಮ್ಮೇಳನ ನಡೆದಿತ್ತು. ಸಾವಿರಾರು ಮುಸ್ಲಿಮ್ ಕಾರ್ಯಕರ್ತರು ಪಾಲ್ಗೊಂಡಿದ್ದ ಸಮ್ಮೇಳನದಲ್ಲಿ ಸಚಿವರು ಕೂಡ ಭಾಗವಹಿಸಿದ್ದರು.ಕಾರ್ಯಕ್ರಮ ಮಗಿದು ತೆರಳುತ್ತಿದ್ದಂತೆಯೇ ಕೆಲ ಮುಸ್ಲಿಂ ಕಾರ್ಯಕರ್ತರು ಖಾದರ್ ಅವರನ್ನು ಸುತ್ತುವರಿದು, ಒಬ್ಬರು ಸಚಿವರಾಗಿ ಕಾರ್ಯಕ್ರಮದ ಕುರಿತು ಹಾಕಲಾಗಿದ್ದ ಬ್ಯಾನರ್ ಗಳನ್ನು ತೆಗೆಯಲು ಯಾಕೆ ಅವಕಾಶ ಮಾಡಿಕೊಟ್ಟಿದ್ದೀರಿ ಅಂತ ಪ್ರಶ್ನಿಸಿ, ಘೇರಾವ್ ಹಾಕಿದ್ದಾರೆ.ಈ ವೇಳೆ ಸಚಿವರು ಚುನಾವಣಾ ದಿನಾಂಕ ಘೋಷಣೆಯಾದಂದೇ ನೀತಿ ಸಂಹಿತೆ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಬ್ಯಾನರ್ ಗಳನ್ನು ಹಾಕಲು ಅವಕಾಶವಿಲ್ಲ ಎಂದು ಹೇಳುವ ಮೂಲಕ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದಾರೆ.Sign in to your account
Username or Email Address


Password

 Remember Me


