ಬೆಂಗಳೂರು: ಚುನಾವಣೆ ಸನೀಹದಲ್ಲಿ ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಧರ್ಮ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ. ಆ ಪಕ್ಷಕ್ಕೆ ಮತ ನೀಡಿ ಎಂದು ಲಿಂಗಾಯತರಿಕೆ ಕರೆ ನೀಡಿದ್ದಾರೆ.ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಕ್ಷೇಪ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ತುರ್ತು ಸಭೆಯಲ್ಲಿ ಮಾತೆ ಮಹಾದೇವಿ ಈ ಘೋಷಣೆ ಹೊರಡಿಸಿದ್ದಾರೆ. ಸ್ವತಂತ್ರ ಧರ್ಮ ಮಾನ್ಯತೆಗೆ ಶ್ರಮಿಸೋ ಪಕ್ಷಕ್ಕೆ ಮತ. ಎಲ್ಲರು ಕಾಂಗ್ರೆಸ್ ಬೆಂಬಲಿಸಬೇಕು ಅಂತಾ ಹೇಳಿದ್ರು.ಅಮಿತ್ ಶಾ ರಾಜ್ಯದ ಶಿಫಾರಸ್ಸು ನಮಗೆ ತಲುಪಿಯೇ ಇಲ್ಲ ಎನ್ನುತ್ತಿದ್ದಾರೆ. ಈ ರೀತಿಯಾಗಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಶಾ ವಿರುದ್ಧ ಮಾತೆ ಕಿಡಿಕಾರಿದ್ರು. ಮುಂದಿನ ಬಸವ ಜಯಂತಿಯಂದು ನಮಗೆ ಸಿಹಿ ಸುದ್ದಿ ನೀಡಬೇಕು ಅಂತಾ ಕೇಂದ್ರ ಸರ್ಕಾರಕ್ಕೆ ಡೆಡ್‍ಲೈನ್ ನೀಡಿದ್ರು. ಇದೇ ವೇಳೆ ಮಾತನಾಡಿದ ಸಾರಂಗ ಶ್ರೀಗಳು, “ಗಂಡಸು” ಅಂದ್ರ್ರೆ ಸಿದ್ದರಾಮಯ್ಯ ಅಂತಾ ಹೊಗಳಿದ್ರು. ಇನ್ನು ಶೀಘ್ರವೇ ಪ್ರಧಾನಿ ಭೇಟಿಯಾಗಲು ಲಿಂಗಾಯಿತ ಮಹಾಸಭಾ ನಿರ್ಧಾರ ಕೈಗೊಂಡಿದೆ ಅಂತಾ ಸಭೆಯಲ್ಲಿ ತಿಳಿಸಲಾಯಿತು.Sign in to your account
Username or Email Address


Password

 Remember Me


