ಬೆಂಗಳೂರು: ಅಪರಿಚಿತ ಯುವಕನೊಬ್ಬನನ್ನು ಕೊಲೆಗೈದ ದುಷ್ಕರ್ಮಿಗಳು ಬಳಿಕ ಶವಕ್ಕೆ ಬೆಂಕಿ ಇಟ್ಟು ಸುಟ್ಟು ಹಾಕಲು ಯತ್ನಿಸಿರುವ ಘಟನೆ ನಗರ ಮಾರತಹಳ್ಳಿ ಬಳಿ ನಡೆದಿದೆ.ಸುಮಾರು 25 ವರ್ಷ ವಯಸ್ಸಿನ ವ್ಯಕ್ತಿಯ ಮೃತ ದೇಹ ಸುಟ್ಟ ರೀತಿಯಲ್ಲಿ ಪತ್ತೆಯಾಗಿದ್ದು, ಬೇರೆಡೆ ಕೊಲೆ ಮಾಡಿ ಮೃತ ದೇಹ ಗುರುತು ಸಿಗದೇ ಇರುವಂತೆ ಮಾಡಲು ಬೆಂಕಿ ಇಟ್ಟು ಸುಟ್ಟು ಹಾಕಿದ್ದಾರೆ. ವ್ಯಕ್ತಿಯ ದೇಹ ಭಾಗಶಃ ಸುಟ್ಟಿರುವ ಕಾರಣ ಮೃತ ದೇಹದ ಗುರುತು ಪತ್ತೆಯಾಗಿಲ್ಲ.ಇಂದು ಬೆಳೆಗ್ಗೆ ಮಾರತಹಳ್ಳಿಯ ಕೆಂಪಾಪುರ ಗ್ರಾಮದ ಪೊದೆಯೊಂದರ ಬಳಿ ಶವ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ದೇಹವನ್ನು ನಗರದ ವಿಕ್ಟೊರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.Sign in to your account
Username or Email Address


Password

 Remember Me


