ಚಾಮರಾಜನಗರ: ನೀರಿನಲ್ಲಿ ಮುಳುಗುತ್ತಿದ್ದ ತನ್ನ ಸ್ನೇಹಿತೆಯನ್ನು ರಕ್ಷಿಸಲು ಹೋಗಿ ಯುವತಿಯೊಬ್ಬಳು ಜಲ ಸಮಾಧಿಯಾಗಿರುವ ಆಘಾತಕಾರಿ ಘಟನೆ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಯರಂಬಾಡಿ ಜಲಾಶಯದಲ್ಲಿ ನಡೆದಿದೆ.ನಿಖಿತಾ ಸ್ನೇಹಿತೆಯನ್ನು ರಕ್ಷಿಸಲು ಹೋಗಿ ಜಲಸಮಾಧಿಯಾದ ಯುವತಿ. ಮೂಲತಃ ಬೆಂಗಳೂರಿನವರಾಗಿದ್ದು, ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದ ವೇಳೆ ಈ ಘಟನೆ ಸಂಭವಿಸಿದೆ. ನಿಖಿತಾ ಸ್ನೇಹಿತೆ ಕಾಲು ಜಾರಿಗೆ ಜಲಾಶಯಕ್ಕೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದಲ್ಲಿ ಇದ್ದ ನಿಖಿತಾ ನೀರಿಗೆ ಧುಮುಕಿ ತನ್ನ ಸ್ನೇಹಿತೆಯನ್ನು ಪಾರು ಮಾಡಲು ಯತ್ನಿಸಿದ್ದಾರೆ.ಈ ವೇಳೆ ದುರಾದೃಷ್ಟವಶಾತ್ ಡ್ಯಾಂ ನಲ್ಲಿ ಸುಳಿ ಇದ್ದ ಕಾರಣ ನಿಖಿತಾ ನೀರಿನಲ್ಲಿ ಜಲ ಸಮಾಧಿಯಾಗಿದ್ದು, ಕೂಡಲೇ ಸ್ನೇಹಿತೆ ಸ್ಥಳೀಯರಿಗೆ ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸದ್ಯ ನಿಖಿತಾ ಸ್ನೇಹಿತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಪೊಲೀಸರು ಸ್ಥಳಕ್ಕೆ ಬಂದಿದ್ದು, ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಬಗ್ಗೆ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 Advertisement 







 Advertisement 




Sign in to your account
Username or Email Address


Password

 Remember Me


