ತುಮಕೂರು: ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ನರ್ಸ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಮತ್ತಿಘಟ್ಟಾ ತಾಲೂಕಿನಲ್ಲಿ ನಡೆದಿದೆ.ವನಿತಾ (32) ಆತ್ಮಹತ್ಯೆಗೆ ಶರಣಾದ ನರ್ಸ್. ಈ ಘಟನೆ ಮೂರುದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವನಿತಾ ಮತ್ತಿಘಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತಿದ್ದರು. ಇದೀಗ ಅವರು ಕರ್ತವ್ಯದಲ್ಲಿ ಇರುವಾಗಲೇ ಮಲೇರಿಯಾ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ವೈದ್ಯ ಡಾ. ಮೋಹನ್, ಎಲ್‍ಎಚ್.ಓ ಅನುಸೂಯಮ್ಮ ಹಾಗೂ ಗ್ರೂಡ್ ಡಿ ನೌಕರ ಸುರೇಶ್ ವಿರುದ್ಧ ಕಿರುಕುಳದ ಆರೋಪವನ್ನು ವನಿತಾ ಪತಿ ಮಾಡಿದ್ದಾರೆ. ಚೀಟಿ ವ್ಯವಹಾರದಲ್ಲಿ ಡಿ ಗ್ರೂಪ್ ನೌಕರ ಸುರೇಶ್ ಹಣ ವಾಪಸ್ ನೀಡದೆ ವಂಚಿಸಿದ್ದನು. ಆದರೆ ಹಣ ಕೇಳಿದಾಗ ಹಿರಿಯ ಅಧಿಕಾರಿಗಳಿಗೆ ಹೇಳಿ ಕಿರುಕುಳ ನೀಡಿಸುತ್ತಿದ್ದನು. ಇದರಿಂದ ವನಿತಾ ಮನನೊಂದು ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವನಿತಾ ಪತಿ ಆರೋಪಿಸಿದ್ದಾರೆ.ಮೃತ ವನಿತಾ ಪತಿ ಈ ಬಗ್ಗೆ ದೂರು ನೀಡಿದ್ದು, ಹಂದನಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 Advertisement 







 Advertisement 




Sign in to your account
Username or Email Address


Password

 Remember Me


