ಕೋಲಾರ, ಚಿಕ್ಕಬಳ್ಳಾಪುರ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಕೊನೆಯ ಜನಾಶೀರ್ವಾದ ಯಾತ್ರೆ ನಡೆಸಲಿದ್ದಾರೆ.ರಾಹುಲ್ ಅವರು ಬೆಳಗ್ಗೆ 11 ಗಂಟೆಗೆ ಕೋಲಾರದ ಮುಳಬಾಗಿಲಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿ, ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಮುಳಬಾಗಿಲು ಆಂಜನೇಯಸ್ವಾಮಿ ಹಾಗೂ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ರೋಡ್ ಶೋ ನಡೆಸಲಿದ್ದಾರೆ. ಇದನ್ನೂ ಓದಿ: ದೂರದಿಂದ್ಲೇ ಗುರಿಯಿಟ್ಟು ರಾಹುಲ್ ಕೊರಳಿಗೆ ಹಾರ ಎಸೆದ ಅಭಿಮಾನಿ- ವಿಡಿಯೋ ಫುಲ್ ವೈರಲ್ಮುಳಬಾಗಿಲಿನಿಂದ ಕೆಜಿಎಫ್ ಕ್ಯಾಸಂಬಳ್ಳಿಯಲ್ಲಿರುವ ಕೆ.ಸಿ.ರೆಡ್ಡಿ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅದಾದ ನಂತರ ಬಂಗಾರಪೇಟೆ ಹಾಗೂ ಕೋಲಾರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ ಅಲ್ಲೂ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಉಚಿತ ಅಕ್ಕಿ ನೀಡಿದ್ರು, ಬಿಎಸ್‍ವೈ ಏನು ಮಾಡಿದ್ದಾರೆ : ರಾಹುಲ್ ಗಾಂಧಿSign in to your account
Username or Email Address


Password

 Remember Me


