ಬೆಂಗಳೂರು: 2018 ರ ವಿಧಾನಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯುವ ಸಲುವಾಗಿ ಹೆಚ್ಚಿನ ಭದ್ರತೆಯನ್ನ ಹೊದಗಿಸಲಾಗಿದೆ.ಹೇಳಿ ಕೇಳಿ ಬೆಂಗಳೂರು ಹೊರವಲಯ ನೆಲಮಂಗಲ ರೌಡಿ ಚಟುವಟಿಕೆಯ ತಾಣವಾಗಿದೆ. ಹೀಗಾಗಿ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಇಂಡೋ-ಟಿಬೆಟ್ ಬಾರ್ಡರ್ ಫೋರ್ಸ್ ನ 95 ಯೋಧರ ಸೇನಾ ತಂಡ ತಾಲೂಕಿಗೆ ಆಗಮಿಸಿದೆ. ಯೋಧರನ್ನು ನೆಲಮಂಗಲ ಪೊಲೀಸರು ಬರಮಾಡಿಕೊಂಡಿದ್ದಾರೆ.ಯೋಧರ ತಂಡ ಚುನಾವಣೆ ಮುಗಿಯುವವರೆಗೂ ತಾಲೂಕಿನಲ್ಲಿ ವಾಸ್ತವ್ಯವಿದ್ದು, ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆ, ಚಕ್ ಪೋಸ್ಟ್ ಗಳಲ್ಲಿ ಸ್ಥಳೀಯ ಪೊಲೀಸರ ಹಾಗೂ ಚುನಾವಣಾ ಅಧಿಕಾರಿಗಳ ಜೊತೆ ಬಿಗಿಭದ್ರತೆಯನ್ನು ಕೈಗೊಳ್ಳಲ್ಲಿದ್ದಾರೆ.Sign in to your account
Username or Email Address


Password

 Remember Me


