ಬೆಳಗಾವಿ: ನಮ್ಮ ದೇಶದ ಹೆಮ್ಮೆಯ ಯೋಗವನ್ನ ಇಡಿ ವಿಶ್ವವೇ ಒಪ್ಪಿಕೊಂಡಿದೆ. ವಿಶ್ವದಾದ್ಯಂತ ಯೋಗ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ವಿಚಿತ್ರ ಎನ್ನುವಂತೆ ಶ್ವಾನವೊಂದು ದಿನನಿತ್ಯ ಯೋಗ ಮಾಡುತ್ತಿದೆ ಅಂದರೆ ನೀವು ನಂಬಲೇಬೇಕು. ಇದು ವಿಚಿತ್ರವಾದರೂ ನಿಜವಾಗಿದೆ.ದಿನನಿತ್ಯ ಶ್ವಾನ ಯೋಗ ಮಾಡುತ್ತಿರುವ ಘಟನೆ ನಡೆಯುತ್ತಿರುವುದು ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪೂರ ಗ್ರಾಮದಲ್ಲಿ. ಕಳೆದ 4 ವರ್ಷಗಳಿಂದ ಈ ಶ್ವಾನ ಯೋಗಾಭ್ಯಾಸ ಮಾಡುವರ ಜೊತೆ ಸೇರಿ ಓಂಕಾರ ಯೋಗವನ್ನು ತಪ್ಪದೆ ಮಾಡುತ್ತಿದೆ.ಗ್ರಾಮದ ಹೊರ ವಲಯದಲ್ಲಿ ದಿನನಿತ್ಯ ಯೋಗ ಮಾಡುವರ ಜೊತೆಗೆ ಬೆಳಿಗ್ಗೆ 5 ಗಂಟೆಗೆ ಹಾಜರಾಗುವ ಶ್ವಾನ ಎಲ್ಲರೊಂದಿಗೆ ಸೇರಿ ತಾನೂ ಯೋಗದಲ್ಲಿ ಮಗ್ನನಾಗಿರುವುದು ಜನಸಾಮಾನ್ಯರ ಅಚ್ಚರಿಗೆ ಕಾರಣವಾಗಿದೆ. ಯಾರಿಗೂ ತೊಂದರೆ ನೀಡದೆ ಈ ಶ್ವಾನ ಯೋಗಾಭ್ಯಾಸ ಮಾಡಿ ಯೋಗ ಮುಗಿದ ನಂತರ ಮತ್ತೆ ಬೆಳಿಗ್ಗೆ ಹಾಜರಾಗುತ್ತಿದೆ.ಯೋಗಾಭ್ಯಾಸ ಮಾಡದೆ ಇರುವವರು ಪ್ರಾಮಾಣಿಕತೆಗೆ ಹೆಸರಾಗಿರುವ ಶ್ವಾನ ಯೋಗಾಭ್ಯಾಸವನ್ನು ನೋಡಿಯಾದರೂ ಯೋಗ ಮಾಡಿ ತಮ್ಮ ಆರೋಗ್ಯ ಕಾಪಾಡುವಂತಾಗಲಿ ಎಂದು ಸ್ಥಳೀಯ ಬಸವರಾಜ ಮೂಡಲಗಿ ಅವರು ಹೇಳಿದ್ದಾರೆ.






 Advertisement 




Sign in to your account
Username or Email Address


Password

 Remember Me


