ಚಿಕ್ಕಬಳ್ಳಾಪುರ: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಲಡ್ಡುಗಳನ್ನ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪೈಪಾಳ್ಯ ಗ್ರಾಮದ ಬಳಿ ನಡೆದಿದೆ.ಬಿಜೆಪಿ ಮುಖಂಡ ಅರಿಕೆರೆ ಕೃಷ್ಣಾರೆಡ್ಡಿಗೆ ಸೇರಿದ ಲಡ್ಡುಗಳಾಗಿದ್ದು, ಲಡ್ಡುಗಳ ಪೊಟ್ಟಣದ ಮೇಲೆ ಅರಿಕೆರೆ ಕೃಷ್ಣಾರೆಡ್ಡಿ, ಬಿಜೆಪಿ ಮುಖಂಡರು ಅಂತ ಮುದ್ರಿಸಲಾಗಿದೆ. ಪೈಪಾಳ್ಯ ಬಳಿ ಇನ್ನೋವಾ ಕಾರು ತಪಾಸಣೆ ವೇಳೆ ಲಡ್ಡುಗಳು, ಬಿಜೆಪಿ ಪಕ್ಷದ ಬಾವುಟ ಹಾಗೂ ಬಿಜೆಪಿ ಪರ ಪ್ರಚಾರದ ಸಾಮಾಗ್ರಿಗಳು ಪತ್ತೆಯಾಗಿವೆ. ಇದನ್ನು ಓದಿ: ಎಲೆಕ್ಷನ್ ಹೊತ್ತಲ್ಲಿ ಕುರುಡು ಕಾಂಚಾಣ – ಒಂದೇ ದಿನದಲ್ಲಿ ದಾಖಲೆ ಇಲ್ಲದ 74 ಲಕ್ಷ ರೂ. ಹಣ ವಶಲಡ್ಡುಗಳು ಸೇರಿದಂತೆ ಪ್ರಚಾರದ ಸಾಮಾಗ್ರಿಗಳನ್ನ ವಶಕ್ಕೆ ಪಡೆದಿರುವ ಚುನಾವಣಾಧಿಕಾರಿಗಳು, ಅನುಮತಿ ಪಡೆಯದೇ ಚುನಾವಣಾ ಪ್ರಚಾರದ ಕಾರ್ಯಕ್ಕೆ ಇನ್ನೋವಾ ಕಾರು ಬಳಕೆ ಮಾಡಿದ್ದಾರೆ ಎಂದು ಇನ್ನೋವಾ ಕಾರನ್ನ ಸೀಝ್ ಮಾಡಿದ್ದಾರೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಚುನಾವಣಾಧಿಕಾರಿಗಳು ದೂರು ಸಲ್ಲಿಸಿದ್ದಾರೆ.


 Advertisement 







 Advertisement 




Sign in to your account
Username or Email Address


Password

 Remember Me


