ರಾಯಚೂರು: ಬೈಕ್ ಹಾಗೂ ಕ್ರೂಸರ್ ನಡುವೆ ಭೀಕರ ಅಪಘಾತವಾಗಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರಿನ ಸಿರವಾರ ತಾಲೂಕಿನ ಪಾತಾಪೂರ ಗ್ರಾಮದ ಬಳಿ ನಡೆದಿದೆ.ಚಂದಪ್ಪ ಮೃತ ಬೈಕ್ ಸವಾರ. ಮೃತ ಹಿಂಬದಿ ಬೈಕ್ ಸವಾರನ ಗುರುತು ತಿಳಿದು ಬಂದಿಲ್ಲ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಮಠ ಗ್ರಾಮದಿಂದ ಶ್ರೀ ಶೈಲಕ್ಕೆ ಹೊರಟಿದ್ದ ಕ್ರೂಸರ್ ಬೈಕ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪಲ್ಟಿಯಾಗಿದ್ದರಿಂದ ಕ್ರೂಸರ್ ನಲ್ಲಿದ್ದ 15 ಜನರು ಗಾಯಗೊಂಡಿದ್ದಾರೆ.ಈ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


