ಬೆಂಗಳೂರು: ಸಂಬಳ ಹೆಚ್ಚಳ ಮಾಡಿ ಎಂದಿದ್ದ ನೌಕರರಿಗೆ ಮಾಲೀಕರೇ ಥಳಿಸಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಗೊಲ್ಲರಹಟ್ಟಿಯಲ್ಲಿರುವ ಶಾಯಿ ಎಕ್ಸ್ ಪೋರ್ಟ್ ಗಾರ್ಮೆಂಟ್ಸ್ ನಲಿ ನಡೆದಿದೆ.ಗಾರ್ಮೆಂಟ್ಸ್ ನ 8 ಜನ ಮಾಲೀಕರು ಮಹಿಳೆಯರು ಸೇರಿದಂತೆ 15ಕ್ಕೂ ಹೆಚ್ಚು ಮಂದಿ ನೌಕರರಿಗೆ ಥಳಿಸಿದ್ದಾರೆಂದು ಆರೋಪಿಸಲಾಗಿದೆ. ಏಪ್ರಿಲ್ 2ರಂದು ಸಂಬಳ ಹೆಚ್ಚಿಸುವಂತೆ ನೌಕರರು ಮನವಿ ಮಾಡಿದ್ದರು. ಬುಧವಾರ ಮತ್ತೆ ಕೇಳಿದಾಗ ನೌಕರರು ಮತ್ತು ಮಾಲೀಕರ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಮಾಲೀಕರು ನೌಕರರ ಮೇಲೆ ಹಲ್ಲೆ ನಡೆಸಿ ಕೆಲಸದಿಂದ ತೆಗೆದು ಹಾಕಿದ್ದಾರೆ.ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಾಯಮ್ಮ ಎಂಬವರನ್ನು ಮಾದನಾಯಕನಹಳ್ಳಿಯ ಶಿವಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


