ಬೆಂಗಳೂರು: ಕಿರುತೆರೆ ಧಾರಾವಾಹಿಗಳ ಮೂಲಕ ಮನೆ-ಮನೆಗೂ ಜೆಕೆ ಎಂದೇ ಚಿರಪರಿಚಿತರಾದ ಜಯರಾಂ ಕಾರ್ತಿಕ್ ಮತ್ತು ಅನುಪಮಾ ಗೌಡ ಮೊದಲ ಬಾರಿಗೆ ಹಿರಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಜೊತೆಯಾಗಿದ್ದ ಅನುಪಮಾ ಮತ್ತು ಜೆಕೆ ‘ಕರಾಳ ರಾತ್ರಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಬಿಗ್‍ಬಾಸ್ ಮನೆಯಲ್ಲಿದ್ದ ನಿರ್ದೇಶಕ ದಯಾಳ್ ಪದ್ಮನಾಭ್ ಅವರು ಅಂದೇ ಜೆಕೆ ಹಾಗೂ ಅನುಪಮಾ ಗೌಡ ಮುಖ್ಯಭೂಮಿಕೆಯಲ್ಲಿ ಸಿನಿಮಾವನ್ನು ನಿರ್ದೇಶಿಸುವುದಾಗಿ ಹೇಳಿದ್ದರು. ಇದೀಗ ಮಾತಿನಂತೆ ನಡೆದುಕೊಂಡ ದಯಾಳ್ ‘ಕರಾಳ ರಾತ್ರಿ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ.1961ರಲ್ಲಿ ನಡೆದ ಘಟನೆಯನ್ನು ಆಧರಿಸಿ ಲೇಖಕ ಮೋಹನ್ ಹಬ್ಬು ‘ಕರಾಳ ರಾತ್ರಿ’ ಎಂಬ ಕಥೆಯನ್ನು ಬರೆದಿದ್ದಾರೆ. ಇಂದು ಅದೇ ಕಥೆಯ ಎಳೆಯನ್ನು ತೆಗೆದುಕೊಂಡ ದಯಾಳ್ 80ರ ದಶಕದ ಟಚ್ ನೀಡಿದ್ದಾರೆ. ಚಿತ್ರದಲ್ಲಿ 1980ರ ಕಾಲದಂತೆ ಹಾಡುಗಳ ಚಿತ್ರೀಕರಣ ನಡೆಯುತ್ತಿದ್ದು, ಅನುಪಮಾ ಮತ್ತು ಜೆಕೆ ನಡುವಿನ ರೊಮ್ಯಾಂಟಿಕ್ ಹಾಡಿನ ಶೂಟಿಂಗ್ ನಡೆಯುತ್ತಿದೆ.ಸಿನಿಮಾ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥೆಯನ್ನು ಹೊಂದಿದ್ದು ಚಿತ್ರ ಚೆನ್ನಾಗಿ ಮೂಡಿಬರುತ್ತಿದೆ ಅಂತಾ ಚಿತ್ರತಂಡ ತಿಳಿಸಿದೆ. ರಂಗಾಯಣ ರಘು, ವೀಣಾ ಸುಂದರ್ ಸೇರಿದಂತೆ ಹಲವು ಕಲಾವಿದರು ಕರಾಳ ರಾತ್ರಿ ಚಿತ್ರದಲ್ಲಿ ನಟಿಸಲಿದ್ದಾರೆ.Sign in to your account
Username or Email Address


Password

 Remember Me


