ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಹೆಚ್ಚುವರಿ ಭದ್ರತೆ ಕೋರಿ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಹಾಗಾದ್ರೆ ಸಚಿವ ಪ್ರಮೋದ್ ಮಧ್ವರಾಜ್ ಗೆ ಬೆದರಿಕೆ ಇದ್ಯಾ ಎಂಬ ಪ್ರಶ್ನೆ ಎದ್ದಿದೆ.ನಗರದಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನಲೆಯಲ್ಲಿ ಕ್ಷೇತ್ರಾದ್ಯಂತ ಪ್ರಚಾರ ಸಭೆಗಳು ಇರುತ್ತದೆ. ಈ ಸಂದರ್ಭದಲ್ಲಿ ಹೆಚ್ಚುವರಿ ಭದ್ರತೆ ನೀಡಬೇಕೆಂದು ಕೋರಿದ್ದೇನೆ. ಗೃಹ ಇಲಾಖೆಯಲ್ಲಿ ಏನು ಬೆಳವಣಿಗೆಯಾಗಿದೆಯೆಂದು ಗೊತ್ತಿಲ್ಲ ಅಂತ ಹೇಳಿದ್ರು.ಸಂಭವನೀಯ ಅನಾಹುತ ತಪ್ಪಿಸಲು ಹೆಚ್ಚುವರಿ ಭದ್ರತೆ ಕೋರಿ ಪತ್ರ ಬರೆದಿದ್ದೇನೆ. ಅವಘಡ ಆಗದಿರಲಿ ಎಂದು ಮುನ್ನಚ್ಚರಿಕಾ ದೃಷ್ಟಿಯಿಂದ ಪತ್ರ ಬರೆಯಲಾಗಿದೆ ಅಂದ್ರು.ಗೃಹ ಇಲಾಖೆಯಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಭದ್ರತೆ ಕೊಡೋದು ಬಿಡೋದು ಸರ್ಕಾರಕ್ಕೆ ಬಿಟ್ಟದ್ದು. ಯಾವ ಕಾರಣಕ್ಕೆ ಭದ್ರತೆ ಬೇಕು ಅಂತ ಸಚಿವರು ಪತ್ರದಲ್ಲಿ ಯಾವುದೇ ಕಾರಣ ಕೊಟ್ಟಿಲ್ಲ. ಮುನ್ನಚ್ಚೆರಿಕೆಗೆ ಎಂದಷ್ಟೇ ಬರೆದಿದ್ದಾರೆ. ಸಚಿವರಿಗೇನಾದ್ರು ಬೆದರಿಕೆ ಇದ್ಯಾ, ಅಥವಾ ನೂರಾರು ಕೋಟಿ ರೂಪಾಯಿ ಒಡೆಯನಿಗೆ ಏನಾದ್ರು ಆಪತ್ತು ಎದುರಾಗಿದ್ಯಾ ಅನ್ನುವ ಪ್ರಶ್ನೆಗಳನ್ನು ಉಡುಪಿ ಜನತೆ ಕೇಳುತ್ತಿದ್ದಾರೆ. ಬಗ್ಗೆ ಸಚಿವರು ಉತ್ತರ ಕೊಡದೆ ನಕ್ಕು, ಸುಮ್ಮನಾಗಿದ್ದಾರೆ.Sign in to your account
Username or Email Address


Password

 Remember Me


