ಬೆಂಗಳೂರು: ಬಿಗ್ ಬಾಸ್ ಕನ್ನಡ-5 ಕಾರ್ಯಕ್ರಮದಲ್ಲಿ ಮೊದಲ ದಿನದಿಂದಲೇ ಗದ್ದಲ-ಗಲಾಟೆಯಿಂದ ಗುರುತಿಸಿಕೊಂಡಿದ್ದ ಕಾಮನ್ ಮ್ಯಾನ್ ದಿವಾಕರ್ ಅವರಿಗೆ ಬಂಪರ್ ಆಫರ್ ವೊಂದು ಹುಡುಕಿಕೊಂಡು ಬಂದಿದೆ.ದಿವಾಕರ್ ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದರೂ ‘ಬಿಗ್ ಬಾಸ್’ ಅಂತ ದೊಡ್ಡ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಸ್ಥಾನ ಗಿಟ್ಟಿಸಿದ ಬಳಿಕ ಕೆಂಪು ಕಲರ್ ಸ್ವಿಫ್ಟ್ ಕಾರು ಖರೀದಿ ಮಾಡಿದ್ದರು. ಅಷ್ಟೇ ಅಲ್ಲದೇ ಸಿನಿಮಾಗಳಲ್ಲಿ ನಟಿಸಬೇಕು ಎಂಬ ತಮ್ಮ ಇಚ್ಛೆಯನ್ನ ಹೊರ ಹಾಕಿದ್ದರು.`ಬಿಗ್ ಬಾಸ್’ ಮನೆಯಲ್ಲಿ ಇದ್ದಾಗ ಕುಡುಕನಾಗಿ ತಮ್ಮ ನಟನಾ ಪ್ರತಿಭೆಯನ್ನು ದಿವಾಕರ್ ಹೊರ ಹಾಕಿದ್ದರು. ಈಗ ಅದೆಲ್ಲವೂ ದಿವಾಕರ್ ಭವಿಷ್ಯಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಈಗ ಚಿತ್ರವೊಂದರ ಪ್ರಮುಖ ಪಾತ್ರದಲ್ಲಿ ನಟಿಸುವ ಸುವರ್ಣಾವಕಾಶ ದಿವಾಕರ್ ಅವರಿಗೆ ಲಭಿಸಿದೆ.`ಸಾಹೇಬ’, `ಬೃಹಸ್ಪತಿ’ ಸಿನಿಮಾಗಳ ಬಳಿಕ ನಟ ಮನೋರಂಜನ್ ರವಿಚಂದ್ರನ್ ಅಭಿನಯಿಸಲು ಒಪ್ಪಿಕೊಂಡಿರುವ ಸಿನಿಮಾ `ಚಿಲ್ಲಂ’. ಇದೇ ಚಿತ್ರದ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚುವ ಅವಕಾಶ ದಿವಾಕರ್ ಪಾಲಾಗಿದೆ. ಈ ಚಿತ್ರದಲ್ಲಿ ಹೀರೋ ಮನೋರಂಜನ್ ರವಿಚಂದ್ರನ್ ಗೆಳೆಯನ ಪಾತ್ರದಲ್ಲಿ ದಿವಾಕರ್ ಕಾಣಿಸಿಕೊಳ್ಳಲಿದ್ದಾರೆ. ನೆಗೆಟಿವ್ ಶೇಡ್ ನಲ್ಲಿ ಮಿಂಚಲಿರುವ ದಿವಾಕರ್ ಇಡೀ ಸಿನಿಮಾದಲ್ಲಿ ಹೀರೋ ಜೊತೆಯಲ್ಲೇ ಇರಲಿದ್ದಾರೆ.ಈ ಚಿತ್ರದಲ್ಲಿ ಮನೋರಂಜನ್ ಗಾಂಜಾ ಸ್ಮಗ್ಲರ್ ಪಾತ್ರ ನಿರ್ವಹಿಸಲಿದ್ದಾರೆ. ‘ಚಿಲ್ಲಂ’ ಚಿತ್ರಕಥೆ ಡ್ರಗ್ಸ್ ಮಾಫಿಯಾ ಸುತ್ತ ಸುತ್ತಲಿದ್ದು, ಪಕ್ಕಾ ಮಾಸ್ ಲುಕ್ ನಲ್ಲಿ ಮನೋರಂಜನ್ ಕಾಣಿಸಿಕೊಳ್ಳಲಿದ್ದಾರೆ.ಇದೇ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ವಿಲನ್ ಆಗಿ ಅಭಿನಯಿಸಲಿದ್ದಾರೆ. ಮುಖ್ಯ ಪಾತ್ರದಲ್ಲಿ ಹಿರಿಯ ನಟಿ ಸರಿತಾ ನಟಿಸಲಿದ್ದಾರೆ. ಇಷ್ಟೆಲ್ಲ ವಿಶೇಷತೆಗಳು ಇರುವ ‘ಚಿಲ್ಲಂ’ ಚಿತ್ರಕ್ಕೆ ಜೆ.ಚಂದ್ರಕಲಾ ಆಕ್ಷನ್ ಕಟ್ ಹೇಳಲಿದ್ದಾರೆ.







 Advertisement 











 Advertisement 




Sign in to your account
Username or Email Address


Password

 Remember Me


