ಬೆಂಗಳೂರು: ಮಂಗಳವಾರ ರಾತ್ರಿ ಖಾಸಗಿ ಬಸ್ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ ನಿಯಂತ್ರಣ ಕಳೆದುಕೊಂಡು ನಿಂತಿದ್ದ ಕಾರ್ ಗೆ ಗುದ್ದಿರುವ ಘಟನೆ ನಡೆದಿದೆ.ಬೆಂಗಳೂರಿನ ಮೈಕೋ ಲೇಔಟ್‍ನ ಜೆಡಿ ಮರ ಸರ್ಕಲ್ ನಲ್ಲಿ ಈ ಅಪಘಾತ ಸಂಭವಿಸಿದ್ದು, ಅದೃಷ್ಟವಷಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಡೈರಿ ಸರ್ಕಲ್ ಕಡೆಯಿಂದ ಅರೆಕೆರೆ ಕಡೆಗೆ ಹೊರಟ್ಟಿದ್ದ ಖಾಸಗಿ ಬಸ್ ನಿಂತಿದ್ದ ಸಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ.ಖಾಸಗಿ ಬಸ್ ಚಾಲಕನ ಈ ಅವಾಂತರದಿಂದ ಜೆಡಿ ಮರ ಸರ್ಕಲ್‍ನಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಸಂಬಂಧ ಕಾರಿನ ಚಾಲಕ ಕಂಟ್ರೋಲ್ ರೂಂಗೆ ಕೆರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಮೈಕೋ ಲೇಔಟ್‍ನ ಪೋಲಿಸರು ರಸ್ತೆಯಲ್ಲಿ ಕಾರ್ ಯಾಕೆ ಪಾರ್ಕ್ ಮಾಡಿದ್ದೆ ಎಂದು ಕಾರ್ ಚಾಲಕ ಶ್ರೀಕಾಂತ್‍ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.ನಂತರ ಜನರೆಲ್ಲ ಬಸ್ ಚಾಲಕ ಕುಡಿದು ಈ ರೀತಿ ಮಾಡಿದ್ದಾನೆ ಎಂದು ಹೇಳಿದ ಮೇಲೆ ಬಸ್ ಚಾಲಕನನ್ನ ವಶಕ್ಕೆ ಪಡೆದು ದೂರು ದಾಖಲಸಿಕೊಂಡಿದ್ದಾರೆ.Sign in to your account
Username or Email Address


Password

 Remember Me


