ಬೆಂಗಳೂರು: ಕಾಲಿವುಡ್ ನಟ ಆರ್ಯ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ‘ರಾಜ ರಾಣಿ’ ಸಿನಿಮಾ ಮಾಡಿರುವ ಈ ನಟ ಅನೇಕ ಹುಡುಗಿಯರ ಪಾಲಿಗೆ ಕನಸಿನ ರಾಜ ಆಗಿದ್ದಾರೆ. ಹೀಗಿರುವಾಗ ಕನ್ನಡದ ಒಬ್ಬ ನಟಿ ನೋಡಿ ಆರ್ಯ ಫಿದಾ ಆಗಿದ್ದಾರೆ.ಕಾಲಿವುಡ್ ಇಂಡಸ್ಟ್ರಿಯ ಸ್ಟಾರ್ ನಟನಾಗಿರುವ ಆರ್ಯಗೆ ಕನ್ನಡದಲ್ಲಿ ಯಾವ ನಟಿ ಇಷ್ಟ ಎಂಬುದು ಅನೇಕರಿಗೆ ಇರುವ ಕುತೂಹಲ. ಇತ್ತೀಚೆಗಷ್ಟೆ ಖಾಸಗಿ ವಾಹಿನಿಯ ‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮಕ್ಕೆ ನಟ ಆರ್ಯ ಆಗಮಿಸಿದ್ದರು. ಈ ವೇಳೆ ಶಿವರಾಜ್ ಕುಮಾರ್ ಕೇಳಿದ ತಮಾಷೆಯ ಪ್ರಶ್ನೆಗಳಿಗೆ ನಗು ನಗುತ್ತಾ ಆರ್ಯ ಉತ್ತರಿಸಿದ್ದಾರೆ.ಸಾಮಾನ್ಯವಾಗಿ ಈ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಡೇಟಿಂಗ್ ಬಗ್ಗೆ ಒಂದು ಪ್ರಶ್ನೆ ಇದ್ದೇ ಇರುತ್ತದೆ. ಅದೇ ರೀತಿ ನಟ ಆರ್ಯಗೂ ಕೂಡ ಶಿವಣ್ಣ ಕಾರ್ಯಕ್ರಮದಲ್ಲಿ ನಟ ಆರ್ಯ ಅವರಿಗೆ ಕಿಸ್, ಹಗ್ ಮತ್ತು ಡೇಟ್ ಯಾರ ಜೊತೆ ಮಾಡುತ್ತೀರಾ ಎಂದು ಕೇಳಿದ್ದಾರೆ. ಅವರ ಪ್ರಶ್ನೆಗೆ ಆರ್ಯ ಡೇಟಿಂಗ್ ಪ್ರಶ್ನೆಗೆ ಆರ್ಯ ಡೇರಿಂಗ್ ಆಗಿ ಉತ್ತರ ನೀಡಿದ್ದಾರೆ.ಶಿವಣ್ಣ ”ನೀವು ಶ್ರಿಯಾ, ಶ್ರದ್ಧಾ ಶ್ರೀನಾಥ್ ಮತ್ತು ರಮ್ಯಾ ಇವರಲ್ಲಿ ಯಾರಿಗೆ ಕಿಸ್ ಕೊಡುತ್ತೀರಾ? ಯಾರ ಜೊತೆಗೆ ಡೇಟ್ ಹೋಗುತ್ತೀರಾ? ಹಾಗೂ ಯಾರಿಗೆ ಹಗ್ ಮಾಡುತ್ತೀರಾ? ಎಂದು ಕೇಳಿದ್ದಾರೆ. ಅದಕ್ಕೆ ಆರ್ಯ ”ನಾನು ಶ್ರಿಯಾಗೆ ಕಿಸ್ ಕೊಡುತ್ತೇನೆ, ಶ್ರದ್ಧಾ ಶ್ರೀನಾಥ್ ಅವರನ್ನು ಹಗ್ ಮಾಡಿಕೊಳ್ಳುತ್ತೇನೆ ಹಾಗೂ ರಮ್ಯಾ ಜೊತೆಗೆ ಡೇಟಿಂಗ್ ಹೋಗುತ್ತೇನೆ” ಎಂದು ಹೇಳಿದ್ದಾರೆ. ಇದನ್ನು ಓದಿ: ಯಾವುದೇ ಷರತ್ತಿಲ್ಲ, ನನ್ನನ್ನು ಮದ್ವೆಯಾಗಲು ಈ ನಂಬರಿಗೆ ಕರೆ ಮಾಡಿ: ನಟ ಆರ್ಯಕಾರ್ಯಕ್ರಮದಲ್ಲಿ ಆರ್ಯಗೆ ಶಿವಣ್ಣ ”ನಿಮಗೆ ಕನ್ನಡದಲ್ಲಿ ಫೇವರೇಟ್ ನಟಿ ಯಾರು?” ಎಂದು ಮತ್ತೊಂದು ಪ್ರಶ್ನೆ ಕೇಳಿದರು. ಆಗ ಆರ್ಯ ರಮ್ಯಾ ಹೆಸರನ್ನು ಹೇಳಿದಾರೆ. ”ರಮ್ಯಾ ಸಿನಿಮಾ ಮಾಡುವಾಗ ತುಂಬಾ ಹಾಟ್ ಆಗಿ ಇದ್ದರು. ಇದರೆ ಈಗ ಅವರು ಹೇಗಿದ್ದಾರೆ ಗೊತ್ತಿಲ್ಲ.” ಎಂದು ಹೇಳಿ ನಕ್ಕಿದ್ದಾರೆ.ಮನೋರಂಜನ್ ಮತ್ತು ವಿನಯ್ ರಾಜ್ ಕುಮಾರ್ ಇತ್ತೀಚೆಗಷ್ಟೆ ನಡೆದ ಸಂದರ್ಶನವೊಂದಲ್ಲಿ ಇಬ್ಬರು ರಮ್ಯಾ ಜೊತೆಗೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಇದರ ಜೊತೆಗೆ ರಮ್ಯಾ ಮತ್ತೆ ಸಿನಿಮಾ ಮಾಡಬೇಕು, ಅವರ ನಟನೆ ತೆರೆ ಮೇಲೆ ನೋಡಬೇಕು ಎಂಬುದು ಕೂಡ ಅನೇಕ ಅಭಿಮಾನಿಗಳ ಆಸೆ ಆಗಿದೆ.






 Advertisement 




Sign in to your account
Username or Email Address


Password

 Remember Me


