ಬೆಂಗಳೂರು: ಸಹಾಯಕ ಪ್ರಾಧ್ಯಾಪಕನೊಬ್ಬ ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದ ಘಟನೆ ಬೆಂಗಳೂರಿನ ಪ್ರತಿಷ್ಠಿತ ಮಹಾರಾಣಿ ಕಾಲೇಜಿನಲ್ಲಿ ನಡೆದಿದೆ.ವಿಶ್ವನಾಥ್ ಮಹಾರಾಣಿ ಕಾಲೇಜಿನ ಜೀವಾಣು ಶಾಸ್ತ್ರದ ಪ್ರಾಧ್ಯಾಪಕನಾಗಿದ್ದು, ಈತ ಮಾಡೋ ಕೆಲಸ ಮಾತ್ರ ಪ್ರಾಧ್ಯಾಪಕ ವೃತ್ತಿಗೆನೇ ಕಳಂಕ ತರೋವಂತದ್ದು. ಮಹಾರಾಣಿ ವಿಜ್ಞಾನ ಕಾಲೇಜ್ ಕ್ಯಾಂಟೀನ್ ಬಳಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾನೆ.ವಿಶ್ವನಾಥ್ ವಿದ್ಯಾರ್ಥಿನಿಗಳ ಜೊತೆ ಚೆಲ್ಲಾಟ ಆಡುತ್ತಾನೆ. ಅನೇಕ ವರ್ಷಗಳಿಂದ ಈ ಕಾಲೇಜಿನಲ್ಲೇ ಕೆಲಸ ಮಾಡಿಕೊಂಡಿದ್ದು, ವಿಶ್ವನಾಥ್‍ನಿಗೆ ಕಾಲೇಜಿನಲ್ಲಿ ಹೇಳೋರು ಕೇಳೋರು ಇಲ್ಲ. ಇದರಿಂದಾನೇ ಅತಿಯಾಗಿ ಆಡುತ್ತಿದ್ದಾನೆ ಎಂದು ಹೇಳಲಾಗಿದೆ.ವಿಶ್ವನಾಥ್ ಕಾಲೇಜು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸ್ತಾನೆ. ಅಷ್ಟೇ ಅಲ್ಲದೇ ಕೊಠಡಿಯ ಬೀಗದ ಕೈ ತನ್ನ ಬಳಿಯೇ ಇಟ್ಟುಕೊಂಡಿರುತ್ತಾನೆ. ಇನ್ನೂ ರಜಾ ದಿನಗಳಲ್ಲಿ ಯಾರಿಗೂ ತಿಳಿಯದಂತೆ ಕಾಲೇಜಿಗೆ ಬಂದು ಕೆಲ ವಿದ್ಯಾರ್ಥಿನಿಯರ ಜೊತೆ ಮಜಾ ಮಾಡುತ್ತಾನೆ.ಇನ್ನು ವಿಶ್ವನಾಥ್‍ನ ಈ ಕೆಲಸದಿಂದ ಬೇಸೆತ್ತಿರೋ ಕಾಲೇಜು ಆಡಳಿತ ಮಂಡಳಿ ನೋಟೀಸ್ ಕೂಡಾ ಜಾರಿ ಮಾಡಿದೆ. ಅಷ್ಟೇ ಅಲ್ಲ ಮಹಿಳಾ ಆಯೋಗಕ್ಕೂ ದೂರು ನೀಡಿದೆ.Sign in to your account
Username or Email Address


Password

 Remember Me


