ಬೆಂಗಳೂರು: ಮದುವೆಯಾಗಿ ಮೂರು ತಿಂಗಳಾದ್ರೂ ಗರ್ಭಿಣಿಯಾಗಿಲ್ಲ ಅಂತಾ ವೈದ್ಯ ಪತಿಯೊಬ್ಬ ಪತ್ನಿಗೆ ಸೆಕ್ಸ್ ಫಿಲ್ಮ್ ಗಳನ್ನು ತೋರಿಸಿ ಕಿರುಕುಳ ನೀಡಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮಂಜುನಾಥ್ ಕಿರುಕುಳ ನೀಡಿದ ವೈದ್ಯ ಪತಿ. ಮಂಜುನಾಥ್ ಮೂರು ವರ್ಷಗಳ ಹಿಂದೆ ಸ್ವಾತಿ (ಹೆಸರು ಬದಲಾಯಿಸಲಾಗಿದೆ) ಎಂಬವರನ್ನು ಮದುವೆ ಆಗಿದ್ದನು. ಆದ್ರೆ ಮದುವೆಯಾಗಿ ಮೂರು ತಿಂಗಳಾದ್ರು ಪತ್ನಿ ಗುಡ್ ನ್ಯೂಸ್ ನೀಡಿಲ್ಲ ಅಂತಾ ಸೆಕ್ಸ್ ಫಿಲ್ಮ್ ತೋರಿಸಿ ಅಸಹಜ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಕಿರುಕುಳ ನೀಡಿದ್ದಾನೆ ಅಂತಾ ಸ್ವಾತಿ ಆರೋಪಿಸಿದ್ದಾರೆ.ಸೆಕ್ಸ್ ಫಿಲ್ಮ್ ಗಳಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ರೆ ಮಕ್ಕಳು ಆಗುತ್ತವೆ ಅಂತಾ ಹಿಂಸೆ ನೀಡುತ್ತಿದ್ದನಂತೆ. ಅಸಹಜ ಲೈಂಗಿಕ ಕ್ರಿಯೆಗೆ ಸಹಕರಿಸದೇ ಹೋದ್ರೆ ನಿನ್ನ ಜೊತೆಗಿನ ಲೈಂಗಿಕ ಕ್ರಿಯೆ ವಿಡಿಯೋವನ್ನು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನು. ಇಷ್ಟು ದಿನಗಳಾದ್ರು ಮಕ್ಕಳಾಗದಕ್ಕೆ ಮಾವನ ಜೊತೆ ಮಲಗಬೇಕೆಂದು ಸಹ ಪತಿ ಮಂಜುನಾಥ್ ಬಲವಂತ ಮಾಡುತ್ತಿದ್ದ ಅಂತಾ ಹೇಳಲಾಗುತ್ತಿದೆ. ಇಷ್ಟು ಮಾತ್ರವಲ್ಲದೇ ಮಂಜನಾಥ್ ಸೋದರ ಪಾರೆಸ್ಟರ್ ರಂಗನಾಥ್ ಮತ್ತು ಅತ್ತೆ-ಮಾವ ಸಹ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರೆಂದು ಎಂದು ಸ್ವಾತಿ ದೂರಿನಲ್ಲಿ ದಾಖಲಿಸಿದ್ದಾರೆ.ಮೆಜೆಸ್ಟಿಕ್ ನಲ್ಲಿರುವ ನನ್ನ ತಂದೆಯ ಮನೆಯನ್ನು ಮಾರಾಟ ಮಾಡಿ ಹಣ ತಂದುಕೊಡನೇಕೆಂದು ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು. ಪತಿ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಪೊಲೀಸರು ಮಾತ್ರ ಮೂರು ತಿಂಗಳವರೆಗೂ ಎಫ್ ಐಆರ್ ದಾಖಲಿಸಿಕೊಂಡಿಲ್ಲ. ಎಫ್ ಐಆರ್ ದಾಖಲಿಸಿದ್ದನು ಪ್ರಶ್ನೆ ಮಾಡಿದ ನನ್ನ ತಂದೆಯ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಅಂತಾ ಸ್ವಾತಿ ಆರೋಪ ಮಾಡಿದ್ದಾರೆ.ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.Sign in to your account
Username or Email Address


Password

 Remember Me


