ಬೆಂಗಳೂರು: ಬಿಜೆಪಿ ಮುಖಂಡ ವಿ. ಸೋಮಣ್ಣ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ತಪ್ಪಲಿದೆ ಅಂತಾ ರಾಜಕೀಯ ವಲಯದಲ್ಲಿ ಕೇಳಿ ಬರುತ್ತದೆ. ಈ ಸಂಬಂಧ ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಸಭೆ ನಡೆದಿತ್ತು. ಸಭೆಯಿಂದ ಹೊರ ಬಂದ ಬಳಿಕ ವಿ.ಸೋಮಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದರು.ಈ ವೇಳೆ ಸ್ಥಳಕ್ಕಾಗಮಿಸಿದ ಕೇಂದ್ರ ಸಚಿವ ಅನಂತಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿಕೆ ಶಿವಕುಮಾರ್ ಮೇಲೆ ಸಾರ್ವಜನಿಕವಾಗಿ ಕಿಡಿಕಾರಿದ್ರು. ನನ್ನ ಮುಂದೆ ನಿಲ್ಬೇಡ, ಹೊಡೆದ್ ಬಿಡ್ತೀನಿ. ನಿಂಗೆ ಮುಂದೈತೆ ಮಾರಿಹಬ್ಬ ಅಂತ ಆವೇಶಭರಿತ ಮಾತುಗಳನ್ನಾಡಿದ್ರು. ಇದನ್ನೂ ಓದಿ: ಮೊದಲು ಹನೂರು, ಅಮೇಲೆ ಗುಂಡ್ಲುಪೇಟೆ, ಬಳಿಕ ಹನೂರು, ಈಗ ಗೋವಿಂದರಾಜನಗರ?-ಸೋಮಣ್ಣಗೆ ಸಿಗುತ್ತಾ ಬಿಜೆಪಿ ಟಿಕೆಟ್?ಭಾನುವಾರ ಕೇಂದ್ರ ಸಚಿವ ಅನಂತ್‍ಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಸೋಮಣ್ಣ ಅವರನ್ನು ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಿಂದ ಕಣಕ್ಕೆ ಇಳಿಯುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ನಿಮಗೆ ಇನ್ನು 4 ವರ್ಷ ಪರಿಷತ್ ಸದಸ್ಯ ಸ್ಥಾನ ಇದೆ. ನಮ್ಮ ಸರ್ಕಾರ ಬಂದ್ರೆ ಸಚಿವರಾಗುವುದು ಗ್ಯಾರೆಂಟಿ, ನೀವು ಗೋವಿಂದರಾಜನಗರದಲ್ಲಿ ಸ್ಪರ್ಧೆ ಮಾಡಿ, ಇಲ್ಲ ಈ ಎಲೆಕ್ಷನ್ ನಲ್ಲಿ ಸುಮ್ಮನಿದ್ದು ಬಿಡಿ ಎಂದ ಅನಂತಕುಮಾರ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯವಾಗಿಯೇ ಸಾರ್ವಜನಿಕವಾಗಿ ಅನಂತಕುಮಾರ್ ಆಪ್ತನ ಮೇಲೆ ತಮ್ಮ ಕೋಪವನ್ನು ತೋರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಹನೂರು ಕ್ಷೇತ್ರದಿಂದಲೇ ಸ್ವರ್ಧಿಸುವ ಬಯಕೆ, ಯಾವುದೇ ಷರತ್ತು ಇಲ್ಲದೇ ಪರಿಮಳಾ ನಾಗಪ್ಪ ಪಕ್ಷಕ್ಕೆ ಬರಲಿ: ಮಾಜಿ ಸಚಿವ ವಿ.ಸೋಮಣ್ಣಅನಂತಕುಮಾರ್ ಅವರು ನೀಡಿದ ಸಲಹೆಯನ್ನು ಸೋಮಣ್ಣ ಬಹುತೇಕ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಇನ್ನೇರೆಡು ದಿನಗಳಲ್ಲಿ ಚುನಾವಣೆ ಸ್ಪರ್ಧೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಅಂತಾ ಸೋಮಣ್ಣ ಹೈಕಮಾಂಡ್ ಗೆ ತಿಳಿಸಿದ್ದಾರೆ ಅಂತಾ ಹೇಳಲಾಗಿದೆ.Sign in to your account
Username or Email Address


Password

 Remember Me


