ದಾವಣಗೆರೆ: ಬೆಳಗಿನ ಜಾವದಲ್ಲಿ ಒಮ್ನಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಗ್ರಾಮದ ಬಳಿ ನಡೆದಿದೆ.ತಾಜ್ ಫೀರ್ ಸಾಬ್, ಆಫೀಜ್ವುಲ್ಲಾ ಖಾನ್ ಹಾಗೂ ಮಹಮದ್ ರಫೀಕ್ ಸಾವನ್ನಪ್ಪಿದ ದುರ್ದೈವಿಗಳು. ಮೃತರು ಜಗಳೂರು ಪಟ್ಟಣದವರಾಗಿದ್ದು, ಆಫೀಜ್ವುಲ್ಲಾ ಖಾನ್ ಜಗಳೂರಿನ ಏರ್ ಟೆಲ್ ಅಂಗಡಿ ಮಾಲೀಕನಾಗಿದ್ದು, ಮಹಮದ್ ರಫಿಕ್ ಟಿಎನ್ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನೂ ತಾಜ್ ಫೀರ್ ಸಾಬ್ ನಿವೃತ್ತ ತಹಸೀಲ್ದಾರ್ ಆಗಿದ್ದರು ಅಂತಾ ತಿಳಿದು ಬಂದಿದೆ.ಹುಬ್ಬಳ್ಳಿಗೆ ತೆರಳಿದ್ದ ಈ ಮೂವರು ದಾವಣಗೆರೆ ಮಾರ್ಗವಾಗಿ ಜಗಳೂರಿಗೆ ಆಗಮಿಸುವ ವೇಳೆ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


