ಬೆಂಗಳೂರು: ಶನಿವಾರ (ಮಾರ್ಚ್31)ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಇರುವ ಕುಕ್ಕರ್ ಗಳ ಲಾರಿಯೊಂದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ಸಂಬಂಧ ಕುಕ್ಕರ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.ಭಾನುವಾರ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹ ತಮ್ಮ ಟ್ವಿಟ್ಟರ್ ನಲ್ಲಿ ಕುಕ್ಕರ್ ಫೋಟೋ ಹಾಕಿಕೊಂಡು ವ್ಯಂಗ್ಯ ಮಾಡಿದ್ದಾರೆ. ಕುಕ್ಕರ್ ಗಳನ್ನು ಸಾಗಿಸುತ್ತಿದ್ದ ಲಾರಿಯ ಎಡಿಟೆಡ್ ಫೋಟೋವನ್ನು ಪ್ರತಾಪ್ ಸಿಂಗ್ ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಇರುವ ಒಂದು ಲಾರಿ ಕುಕ್ಕರ್ ವಶಕ್ಕೆ!ಕುಕ್ಕರ್ ಬೇಕಾ ಕುಕ್ಕರ್, ನಾನು ಲಕ್ಷ್ಮೀ ಹೆಬ್ಬಾಳ್ಕರ್, ಸುಮ್ನೆ ಬಿಡೋಲ್ಲ ವೋಟ್ ಕೊಡದೇ ಮಾಡಿದ್ರೆ ಮಕ್ಕರ್! ಅಂತಾ ಪ್ರತಾಪ್ ಸಿಂಹ ಬರೆದುಕೊಂಡಿದ್ದಾರೆ. ಇನ್ನೂ ಫೋಟೋ ಸಹ ಎಡಿಟ್ ಮಾಡಲಾಗಿದ್ದು, ಲಾರಿ ಜೊತೆ ಲಕ್ಷ್ಮೀ ಹೆಬ್ಬಾಳ್ಕರ್ ಫೋಟೋ ಸೇರಿಸಲಾಗಿದೆ. ಕುಕ್ಕರ್ ಸಿಗಲಿಲ್ಲ ಅಂತಾ ಬೇಜಾರಾಗ್ಬೇಡಿ, ನಾನೇ ಕುಕ್ ಮಾಡಿ ಬಾಕ್ಸ್ ನಲ್ಲಿ ಹಾಕಿ ಅಮೇಜಾನ್ ನಲ್ಲಿ ಡೆಲಿವರಿ ಮಾಡ್ತೇನೆ ಅಂತಾ ಬರೆಯಲಾಗಿದೆ.ಕುಕ್ಕರ್ ಬೇಕಾ ಕುಕ್ಕರ್, ನಾನು ಲಕ್ಷ್ಮೀ ಹೆಬ್ಬಾಳ್ಕರ್, ಸುಮ್ನೆ ಬಿಡೋಲ್ಲ ವೋಟ್ ಕೊಡದೆ ಮಾಡಿದ್ರೆ ಮಕ್ಕರ್! pic.twitter.com/CgTrW9xsDS— Pratap Simha (@mepratap) April 1, 2018Sign in to your account
Username or Email Address


Password

 Remember Me


