ರಾಯಚೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿ, ಮಗ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಕಲಮಂಗಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಈರಮ್ಮ (60) ಮತ್ತು ಮಗ ಭೀಮನಗೌಡ (33) ಮೃತ ದುರ್ದೈವಿಗಳು. ಭಾನುವಾರ ರಾತ್ರಿ ಇಬ್ಬರು ಗ್ರಾಮದ ಕುಡಿಯುವ ನೀರಿನ ಬಾವಿಗೆ ಬಿದ್ದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ ಗ್ರಾಮಸ್ಥರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಪ್ರತಿದಿನ ಮನೆಯಲ್ಲಿ ಅತ್ತೆ ಸೊಸೆ ಜಗಳವಾಡುತ್ತಿದ್ದ ಹಿನ್ನೆಲೆಯಲ್ಲಿ ಭೀಮನಗೌಡ ಸಹ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು. ಆದರೆ ಜಗಳದ ಸಂಬಂಧವೇ ಆತ್ಮಹತ್ಯೆಗೆ ಶರಣಾಗಿದ್ದಾರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗ್ರಾಮಸ್ಥರು ನೋಡಿದ ನಂತರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.ವಿಚಾರ ತಿಳಿದ ಈ ಘಟನೆ ಹಿನ್ನೆಲೆ ತುರ್ವಿಹಾಳ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಕಲಂಮಗಿ ಗ್ರಾಮದಲ್ಲಿ ನೀರಿನ ಮೂಲವಾಗಿ ಎರಡು ಬಾವಿಗಳು ಮಾತ್ರ ಇವೆ. ಈಗ ತಾಯಿ ಮಗನ ಆತ್ಮಹತ್ಯೆಯಿಂದ ಈ ಬಾವಿ ಹತ್ತಿರ ಸುಳಿಯಲು ಜನ ಹೆದರುತ್ತಿದ್ದಾರೆ.


 Advertisement 







 Advertisement 




Sign in to your account
Username or Email Address


Password

 Remember Me


