ಬೆಂಗಳೂರು: ತಪಾಸಣೆ ವೇಳೆ ಬೈಕ್ ಸವಾರನೊಬ್ಬ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಗರದ ಹೆಚ್‍ಎಸ್‍ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಹೆಚ್‍ಎಸ್‍ಆರ್ ಲೇಔಟ್ ಸಂಚಾರಿ ಠಾಣೆ ಪಿಎಸ್‍ಐ ರವೀಂದ್ರ ರಾವ್‍ಗೆ ಗಾಯಗಳಾಗಿದ್ದು, ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ ಪೊಲೀಸರಿಗೆ ಡಿಕ್ಕಿ ಹೊಡೆದು ಬೈಕ್ ಸವಾರರು ಪರಾರಿಯಾಗಿದ್ದಾರೆ.ಬೈಕ್ ಸವಾರರು ಕಾನೂನು ಉಲ್ಲಂಘಿಸಿದ್ದು, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಫೈನ್ ಹಾಕುತ್ತಿದ್ದರು. ಇದೇ ವೇಳೆ ಬೈಕ್ ಸವಾರರು ಹೆಲ್ಮೆಟ್ ಹಾಕದೇ ಬಂದಿದ್ದರು. ಆಗ ಬೈಕ್ ಸವಾರನನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಗಳ ಮೇಲೆ ಬೈಕ್ ನಲ್ಲಿ ಹರಿಸಿ ಪರಾರಿಯಾಗಿದ್ದಾರೆ.ಬೈಕ್ ಸವಾರರು ಟ್ರಾಫಿಕ್ ಪಿಎಸ್‍ಐ ರವೀಂದ್ರ ಅವರಿಗೆ ಗುದ್ದಿದ್ದಾರೆ. ಗಾಯಗೊಂಡ ಪಿಎಸ್‍ಐ ರವೀಂದ್ರ ರಾವ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಈ ಬಗ್ಗೆ ಹೆಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿಡಿಯೋ: ಬ್ಯಾರಿಕೇಡ್ ಅಡ್ಡವಿರಿಸಿದ್ರೂ ನಾಲ್ವರು ಪೊಲೀಸರ ಮೇಲೆ ಕಾರು ಚಲಾಯಿಸಿಯೇ ಬಿಟ್ಟ!Sign in to your account
Username or Email Address


Password

 Remember Me


