ಕೊಪ್ಪಳ: ಪತಿ-ಪತ್ನಿ ಜಗಳದ ನಡುವೆ ಕೂಸು ಬಡವವಾದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಎ.ಪಿ.ಎಮ್.ಸಿ. ಬಳಿ ನಡೆದಿದೆ.ನೀಲಪ್ಪ ಹಾಗೂ ಸೌಭಾಗ್ಯ ಮಗುವಿನೊಂದಿಗೆ ಗಂಗಾವತಿಯಿಂದ ಹೊರಟಿದ್ದರು. ಬಸ್ ನಲ್ಲಿ ನೀಲಪ್ಪ ಹಾಗೂ ಸೌಭಾಗ್ಯ ಮಧ್ಯೆ ಜಗಳ ನಡೆಯಿತ್ತು. ಸೌಭಾಗ್ಯ ಜಗಳವಾಡಿ ಮಗುವಿನೊಂದಿಗೆ ಬಸ್ಸಿನಿಂದ ಕೆಳಗೆ ಜಿಗಿದಿದ್ದಾಳೆ. ಜಿಗಿದ ನಂತರ ಕೂಡಲೇ ಮಗು ಮೂರ್ಛೆ ಹೋಗಿದ್ದು, ತಂದೆ ನೀಲಪ್ಪ ಮಗುವನ್ನು ಎತ್ತುಕೊಂಡು ಹೋಗಿದ್ದಾರೆ.ಒಂದು ವರ್ಷದ ಮಗ ಮಂಜುನಾಥ್ ನೊಂದಿಗೆ ನೀಲಪ್ಪ ಕಾಣೆಯಾಗಿದ್ದು, ಗಾಯಗೊಂಡ ಸೌಭಾಗ್ಯಗೆ ಗಂಗಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಬಗ್ಗೆ ಬಸ್ ಡ್ರೈವರ್ ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.Sign in to your account
Username or Email Address


Password

 Remember Me


