ಹಾಸನ: ಜಿಲ್ಲೆಯ ಹೊಳೇನರಸೀಪುರ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕುರಿತಂತೆ ಗೊಂದಲ ಮುಗಿದಂತೆ ಕಾಣುತ್ತಿಲ್ಲ. ಮಾಜಿ ಸಂಸದ ದಿವಂಗತ ಜಿ.ಪುಟ್ಟಸ್ವಾಮಿಗೌಡರ ಸೊಸೆ ಅನುಪಮಾ ಮಹೇಶ್, ಕಾಂಗ್ರೆಸ್ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ವಿರುದ್ಧ ಬಂಡಾಯ ಸಾರಿದ್ದಾರೆ.ಈ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಮಕ್ಕಳನ್ನು ಸೋಲಿಸಲೇಬೇಕೆಂದು ಪಣತೊಟ್ಟಿರುವ ಸಿಎಂಗೆ ಶಾಕ್ ಆಗಿದೆ. ಹೊಳೆನರಸೀಪುರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರೋ ಅನುಪಮಾ ಅವರು ಇದೀಗ ಮುಖ್ಯಮಂತ್ರಿಯವರಿಗೇ ಸೆಡ್ಡು ಹೊಡೆದಿದ್ದಾರೆ.ಅನುಪಮಾ ಮಹೇಶ್ ಕೂಡ ಇದೇ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದು, ಮನವಿ ಕೂಡ ಸಲ್ಲಿಸಿದ್ದಾರೆ. ಕಳೆದ 10 ವರ್ಷಗಳಿಂದ ಪಕ್ಷ ಸಂಘಟನೆಗಾಗಿ ನಾನು ತೊಡಗಿಸಿಕೊಂಡಿದ್ದೆನೆ. 65 ಸಾವಿರ ಮತದಾರರು ನನ್ನ ಪರ ಮತ ಚಲಾಯಿಸಿದ್ದಾರೆ. ಮುಂದಿನ ನನ್ನ ನಿಲುವು ಕುರಿತು ಕಾರ್ಯಕರ್ತರು ಹೇಳಿದಂತೆ ನಾನು ಕೇಳುತ್ತೇನೆ. ಇದೇ ಕ್ಷೇತ್ರದ ಯಾರಿಗಾದ್ರೂ ಟಿಕೇಟ್ ನೀಡಲಿ ನಾನು ಕೂಡ ಪಕ್ಷಕ್ಕಾಗಿ ದುಡಿಯುತ್ತೇನೆ. ಆದ್ರೆ ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ನೀಡಿದ್ರೆ ಕಾರ್ಯಕರ್ತರ ತೀರ್ಮಾನವೇ ಅಂತಿಮ ಎಂದು ಹೇಳಿಕೆ ನೀಡುವ ಮೂಲಕ ಬಂಡಾಯದ ಸೂಚನೆ ನೀಡಿದ್ದಾರೆ.ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಬಾಗೂರು ಮಂಜೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭ್ಯರ್ಥಿಯಾಗಿದ್ದು, ಇತ್ತೀಚೆಗೆ ವೈರಲ್ ಆಗಿದ್ದ ಮೊಬೈಲ್ ಸಂಭಾಷಣೆಯಲ್ಲಿ ಸಿಎಂ ಅವರು ಸ್ವತಃ ಹೊಳೇನರಸೀಪುರಕ್ಕೆ ಹೋಗುವಂತೆ ಹೇಳಿದ್ದರು.Sign in to your account
Username or Email Address


Password

 Remember Me


