ಬಳ್ಳಾರಿ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಬಳಿಕ ಶವವನ್ನು ಕಾಲುವೆಗೆ ಎಸೆದು ಪೊಲೀಸರಿಗೆ ಶರಣಾಗಿರುವ ಘಟನೆಯೊಂದು ಜಿಲ್ಲೆಯ ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ನಡೆದಿದೆ.ಶಶಿಕಲಾ (21) ಮೃತ ದುರ್ದೈವಿ. ಪತಿ ಉಮೇಶ್ ಎರಡು ಮದುವೆಯಾಗಿದ್ದನು. ಆದರೆ ಈತ ಮೊದಲನೇ ಹೆಂಡತಿಯ ಮೇಲೆ ಸದಾ ಅನುಮಾನಪಡುತ್ತಿದ್ದನು. ಹೀಗಾಗಿ ಮೊದಲನೇ ಪತ್ನಿ ಶಶಿಕಲಾಳನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ.ಶಶಿಕಲಾ ಏಳು ತಿಂಗಳ ಗರ್ಭಿಣಿಯಾಗಿದ್ದರೂ ಆಕೆಯನ್ನು ನಿರ್ದಯವಾಗಿ ಕಲ್ಲಿನಿಂದ ಜಜ್ಜಿ ಪತಿ ಉಮೇಶ್ ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಪತ್ನಿಯ ಶವವನ್ನು ಕಾಲುವೆಗೆ ಎಸೆದು ಕಂಪ್ಲಿ ಪೊಲೀಸರಿಗೆ ಶರಣಾಗಿದ್ದಾನೆ.ಉಮೇಶ್, ಮೊದಲ ಪತ್ನಿ ಶಶಿಕಲಾಳಿಗೆ ಮಕ್ಕಳಾಗಲ್ಲ ಎಂದು ಎರಡನೇ ಮದುವೆಯಾಗಿದ್ದನು. ಆದರೆ ಮೊದಲ ಪತ್ನಿ ಏಳು ತಿಂಗಳ ಗರ್ಭಿಣಿಯಾದ ನಂತರ ಅನುಮಾನಗೊಂಡು ಈಗ ಪತ್ನಿಯನ್ನು ಕೊಲೆಗೈದಿದ್ದಾನೆ. ಸದ್ಯ ಆರೋಪಿ ಉಮೇಶ್ ನನ್ನು ಕಂಪ್ಲಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ಶಶಿಕಲಾ ಪೋಷಕರಿಗೆ ವಿಷಯ ತಿಳಿಯುತ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿದೆ.ಈ ಘಟನೆಯ ಕುರಿತು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


