ಬೆಂಗಳೂರು: ಚುನಾವಣಾ ಚಾಣಕ್ಯ ಎಂದೇ ಬಿಂಬಿತವಾಗಿರುವ ಅಮಿತ್ ಶಾ ಪಬ್ಲಿಕ್ ಟಿವಿಗೆ ವಿಶೇಷ ಸಂದರ್ಶನವನ್ನು ನೀಡಿದ್ದಾರೆ. ಸಂದರ್ಶನದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಕೇಳಿದ ಪ್ರಶ್ನೆಗೆ ಖಡಕ್ ಉತ್ತರಗಳನ್ನು ನೀಡಿದ್ದಾರೆ.ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಬಗ್ಗೆ ಬಿಜೆಪಿ ಸಾಕಷ್ಟು ಮೃದು ಧೋರಣೆಯನ್ನು ತೋರಿಸುತ್ತಿದೆ. ಒಂದು ವೇಳೆ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ್ರೆ ಮೈತ್ರಿ ಸರಳವಾಗಿರಲೆಂದು ಬಿಜೆಪಿ ಈಗಲೇ ಪ್ಲಾನ್ ಮಾಡಿಕೊಂಡಿದೆ ಅಂತಾ ಸುದ್ದಿಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಈ ಬಗ್ಗೆ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಅಮಿತ್ ಶಾ ಈ ರೀತಿಯಾಗಿ ಉತ್ತರ ನೀಡಿದ್ರು.ಜೆಡಿಎಸ್ ಜೊತೆ ನಾವು ಚುನಾವಣಾ ಹೊಂದಾಣಿಕೆಯನ್ನು ಮಾಡಿಲ್ಲ. ನಾವು ಪ್ರತಿಕ್ಷೇತ್ರ ಗೆಲ್ಲಲೇಬೇಕೆಂದು ಚುನಾವಣೆ ಎದುರಿಸಿ ಪೂರ್ಣಪ್ರಮಾಣದ ಸರ್ಕಾರವನ್ನು ರಚಿಸುತ್ತೇವೆ. ನಾನು ಮೊದಲಿನಿಂದಲೂ 300 ಸ್ಥಾನ ಗೆಲ್ಲುತ್ತೇವೆ ಅಂತ ಹೇಳುತ್ತಿದ್ದೆ. ತ್ರಿಪುರಾದಲ್ಲಿ 38-42 ಅಂತ ಅಂದುಕೊಂಡಿದ್ದೆವು. 43 ಸ್ಥಾನ ಗೆದ್ದೆವು. ಜೆಡಿಎಸ್ ಈಗ ಅಧಿಕಾರದಲ್ಲಿಲ್ಲ. ಜೆಡಿಎಸ್ ವಿರುದ್ಧ ಹೋರಾಡುವ ಪ್ರಶ್ನೆನೇ ಉದ್ಭವಿಸುವುದಿಲ್ಲ. 5 ವರ್ಷದ ದುರಾಡಳಿತ ನಡೆಸಿದ್ದು ಕಾಂಗ್ರೆಸ್. ಜೆಡಿಎಸ್‍ನಿಂದ ಕಾಂಗ್ರೆಸನ್ನು ಕಿತ್ತೊಗೆಯಲು ಸಾಧ್ಯವಿಲ್ಲ. ಜೆಡಿಎಸ್‍ಗೆ ಮತ ಹಾಕಿದರೆ ಅದು ವ್ಯರ್ಥ. ಜೆಡಿಎಸ್ ಸರ್ಕಾರ ರಚಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಬೇಕೆಂದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಅಂತಾ ಉತ್ತರಿಸಿದ್ರು.Sign in to your account
Username or Email Address


Password

 Remember Me


