ಮಂಗಳೂರು: ಹುಡುಗಿಯೊಬ್ಬಳಿಗೆ ಮೆಸೇಜ್ ಮಾಡಿದ ಎಂದು ಆರೋಪಿಸಿ ಮುಸ್ಲಿಂ ಯುವಕನೊಬ್ಬನನ್ನು ಮನೆಯಲ್ಲಿ ಕೂಡಿಹಾಕಿ, ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ದಕ್ಷಿಣ ಕನ್ನಡ-ಕಾಸರಗೋಡು ಗಡಿಭಾಗದಲ್ಲಿ ಈ ಘಟನೆ ನಡೆದಿದ್ದು ಅಂತಾ ಹೇಳಲಾಗುತ್ತಿದ್ದು, ನಿರ್ದಿಷ್ಟ ಪ್ರದೇಶದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.ಮುಸ್ಲಿಮರೇ ಮನೆಗೆ ಕರೆದು ಯುವಕನನ್ನು ಕೈಕಾಲು ಕಟ್ಟಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ತಮ್ಮ ಹುಡುಗಿಯನ್ನು ಪುಸಲಾಯಿಸಲು ಯತ್ನಿಸಿದ್ದಾನೆಂಬ ಒಂದೇ ಕಾರಣಕ್ಕೆ ಅರೆಬೆತ್ತಲೆಯಾಗಿಸಿ ಹಲ್ಲೆ ಮಾಡಿದ್ದಾರೆ.ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯುವಕನ ಮೇಲಿನ ಹಲ್ಲೆ ದೃಶ್ಯ ನೋಡಿದ್ರೆ ಕರುಳು ಚುರುಕ್ ಎನ್ನುವಂತಿದೆ. Sign in to your account
Username or Email Address


Password

 Remember Me


