ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎದುರು ಸಿದ್ದರಾಮಯ್ಯ ಚಿಕ್ಕ ಬಾಲಕನಿದ್ದಂತೆ ಅಂತ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.ಬಿಜೆಪಿ ಕಾರ್ಯಾಲಯ ಉದ್ಘಾಟನೆ ಹಾಗೂ ನವಶಕ್ತಿ ಸಮಾವೇಶಕ್ಕಾಗಿ ಬಾಗಲಕೋಟೆ ತಾಲೂಕಿನ ರಾಂಪೂರು ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು, ಸಿದ್ದರಾಮಯ್ಯನವರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ದುರಾಹಂಕಾರದಿಂದ ಮಾತನಾಡ್ತಿದ್ದಾರೆ. ಇದು ಬಹಳದಿನ ಉಳಿಯೋದಿಲ್ಲ ಅಂತ ಹೇಳಿದ್ರು.5 ವರ್ಷ ಮುಖ್ಯಮಂತ್ರಿಯಾಗಿದ್ದೇ ಸಾಧನೆ ಎಂಬಂತೆ ವರ್ತಿಸ್ತಿರೋ ಸಿದ್ದರಾಮಯ್ಯ ಎದುರು ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ. ಆದ್ರೆ ಮೋದಿ ಹಾಗೂ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ 21 ರಾಜ್ಯದಲ್ಲಿ ಅಧಿಕಾರ ಹಿಡಿದಿದೆ ಎಂದ ಅಂದ ಅವರು, ಈ ಹಿಂದೆ ರಾಹುಲ್ ಮತ್ತು ಕಾಂಗ್ರೆಸ್‍ಗೆ ಮಠಮಾನ್ಯ, ಹಿಂದು ಸ್ವಾಮೀಜಿಗಳೆಂದ್ರೆ ಅಲರ್ಜಿ ಇತ್ತು. ಈಗ ಹಿಂದೂಗಳು ತಮ್ಮ ವಿರುದ್ಧ ಆಕ್ರೋಶಗೊಂಡಿದ್ದಾರೆಂದು ಮಠ-ಮಾನ್ಯಗಳಿಗೆ ಅಲೆದಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು.ವೀರಶೈವ ಲಿಂಗಾಯತ ಧರ್ಮ ವಿಚಾರದಲ್ಲಿ, ಸಿದ್ದರಾಮಯ್ಯ ಧರ್ಮವನ್ನ ಒಡೆಯುವ ಆಟವಾಡಿದ್ದಾರೆ. ಇದರ ಹಿಂದಿರುವ ಬ್ರೇನ್ ಸಿದ್ದರಾಮಯ್ಯನವರದ್ದೇ ಆಗಿದೆ. ಕರ್ನಾಟಕ ಇತಿಹಾಸದಲ್ಲೇ ಸ್ವಾಮಿಗಳನ್ನ ಬೀದಿಗೆ ತರುವಂತಹ ಕೆಲಸ ಸಿದ್ದರಾಮಯ್ಯ ಮಾಡಿದ್ದು. ಇದಕ್ಕೆ ರಾಜ್ಯದ ಜನರೇ ಬುದ್ಧಿ ಕಲಿಸಿದ್ದಾರೆ ಎಂದ್ರು.Sign in to your account
Username or Email Address


Password

 Remember Me


