ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನಿಶ್ಚಿತಾರ್ಥವಾದ ಬಳಿಕ ವರ ಮದುವೆಯಾಗುವುದಿಲ್ಲ ಎಂದು ಉಲ್ಟಾ ಹೊಡೆದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.ಬ್ಯಾಡರಹಳ್ಳಿಯ ನಿವಾಸಿ ಪುನೀತ್ ಯುವತಿಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ಬ್ಯಾಡರಹಳ್ಳಿಯಲ್ಲಿ ನಿವಾಸಿ ಪುನೀತ್ ಹಾಗೂ ತಾವರೆಕೆರೆಯ ಪ್ರಸನ್ನ ಚರಿಪಾಳ್ಯದ ನಿವಾಸಿ ಶಾಂತಿಗೆ ಮದುವೆ ನಿಶ್ಚಯವಾಗಿತ್ತು.ನವೆಂಬರ್ 26ರಂದು ಹಿರಿಯರ ಸಮ್ಮುಖದಲ್ಲಿ ಶಾಂತಿ ಹಾಗೂ ಪುನೀತ್‍ಗೆ ನಿಶ್ಚಿತಾರ್ಥ ನೆರವೇರಿತ್ತು. ಅಂದೇ ಏಪ್ರಿಲ್ 21 ಹಾಗೂ 22ಕ್ಕೆ ಮದುವೆ ಕೂಡ ನಿಶ್ಚಯವಾಗಿತ್ತು. ಆದರೆ ಈಗ ವರ ಪುನೀತ್ ಮದುವೆಗೆ ನಿರಾಕರಿಸಿದ್ದು, ನೊಂದ ಶಾಂತಿ ಮತ್ತು ಅವರ ಷೋಷಕರು ಒಂದು ವಾರದಿಂದ ಪುನೀತ್ ಮನೆ ಎದುರು ಧರಣಿ ಕುಳಿತಿದ್ದರು.ಧರಣಿಯಿಂದ ಆಕ್ರೋಶಗೊಂಡ ವರ ಪುನೀತ್ ಹಾಗೂ ಆತನ ಸಹೋದರ ಬೀರೇಶ್ ಶುಕ್ರವಾರ ರಾತ್ರಿ ಧರಣಿ ಕುಳಿತಿದ್ದ ಶಾಂತಿ ಮತ್ತು ಆಕೆಯ ತಂದೆ, ತಾಯಿಯ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ ನನ್ನ ತಾಯಿಗೆ ನೀನು ಬೈದಿದ್ದೀಯ ಅದಕ್ಕೆ ನಾನು ನಿನ್ನನ್ನು ಮದುವೆಯಾಗಲ್ಲ ಎಂದು ಹೇಳಿದ್ದಾನೆ.ಸದ್ಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಶಾಂತಿ ಷೋಷಕರು ದೂರು ನೀಡಿದ್ದಾರೆ. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


