ರಾಯಚೂರು: ಕಾಲುವೆಗೆ ಬಿದ್ದಿದ್ದ 80 ವರ್ಷದ ಅಜ್ಜಿಯೊಬ್ಬರನ್ನು ಗ್ರಾಮಸ್ಥರು ರಕ್ಷಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.ಅಜ್ಜಿಯನ್ನು ಈರಮ್ಮ ಎಂದು ಗುರುತಿಸಲಾಗಿದ್ದು,ಹಟ್ಟಿ ಚಿನ್ನದ ಗಣಿ ಬಳಿಯ ಕೋಠಾ ಗ್ರಾಮದವರು ಎನ್ನಲಾಗಿದೆ. ಸದ್ಯ ಗ್ರಾಮಸ್ಥರ ಸಹಾಯದಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನೀರು ಕುಡಿಯಲೆಂದು ಕಾಲುವೆಗೆ ಇಳಿದಾಗ  ಕಾಲುಜಾರಿ ಬಿದ್ದಿರುವುದಾಗಿ ಅಜ್ಜಿ ಹೇಳುತ್ತಿದ್ದಾರೆ. ಈ ಘಟನೆ ಲಿಂಗಸ್ಗೂರು ತಾಲೂಕಿನ ಗಲಗಿನ ದೊಡ್ಡಿ ಬಳಿ ಇರುವ 100 ಅಡಿ ಆಳದ ಕಾಲುವೆಯಲ್ಲಿ ನಡೆದಿದೆ.ಘಟನೆಯಿಂದ ಅಜ್ಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಜ್ಜಿ ಕಾಲುವೆಗೆ ಬಿದ್ದಿರುವುದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಅಜ್ಜಿಯನ್ನು ಕಾಲುವೆಯಿಂದ ಮೇಲಕ್ಕೆತ್ತಿ ಆಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.Sign in to your account
Username or Email Address


Password

 Remember Me


