ಮೈಸೂರು: ಪ್ರೇಮ ವೈಫಲ್ಯದಿಂದ ಯುವಕನೊಬ್ಬ ಹೈಟೆನ್ಷನ್ ವಿದ್ಯುತ್ ಕಂಬವೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾ ಸೃಷ್ಟಿಸಿದ ಘಟನೆ ರಾಮಕೃಷ್ಣ ನಗರದಲ್ಲಿ ನಡೆದಿದೆ.ಶಂಕರ್(30) ಎಂಬಾತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಯುವಕ. ಈತ ದಟ್ಟಗಳ್ಳಿಯ ಮೀನಾ ಮಾರ್ಬಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದು, ನಗರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಅಲ್ಲದೇ ತನ್ನ ಪ್ರೀತಿಯ ಕುರಿತು ಆಕೆಗೆ ತಿಳಿಸಿದ್ದ. ಆದರೆ ಯುವತಿ ಶಂಕರ್ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಮನನೊಂದ ಶಂಕರ್ ಇಂದು ಮಧ್ಯಾಹ್ನದ ವೇಳೆಗೆ ಆತ್ಮಹತ್ಯೆ ಮಾಡಿಕೊಳ್ಳಲು ನಗರದ ಆಂದೋಲನ ವೃತ್ತದ ಬಳಿ ಇರುವ ವಿದ್ಯುತ್ ಕಂಬವೇರಿ ಕುಳಿತ್ತಿದ್ದ.ಯುವಕನ ಹುಚ್ಚಾಟವನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಹಾಗೂ ಕುವೆಂಪು ನಗರದ ಪೊಲೀಸರು ಶಂಕರ್ ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ವೇಳೆ ಯುವಕನ ತಾಯಿ ಸಹ ಮಗನನ್ನು ಕೆಳಗಿಳಿಯುವಂತೆ ಮನವಿ ಮಾಡಿಕೊಂಡಿದ್ದರು.https://www.youtube.com/watch?v=wl9o44BQsMwSign in to your account
Username or Email Address


Password

 Remember Me


