ಬೆಂಗಳೂರು: ಜಾನಿ ಮೇರಾ ನಾಮ್ ಚಿತ್ರದ ನಂತರ ದುನಿಯಾ ವಿಜಯ್ ಮತ್ತು ಪ್ರೀತಂ ಗುಬ್ಬಿ ‘ಜಾನಿ ಜಾನಿ ಯೆಸ್ ಪಪ್ಪಾ’ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ರಚಿತಾ ರಾಮ್ ಮತ್ತು ವಿಜಿ ಒಟ್ಟಾಗಿ ನಟಿಸಿರೋ ಈ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಬೇರೊಂದು ಲೋಕವನ್ನೇ ಸೃಷ್ಟಿಸಿದ್ದ ಚಿತ್ರ ತಂಡ ಅಲ್ಲಿಯೇ ಐವತ್ತು ದಿನಗಳ ಚಿತ್ರೀಕರಣವನ್ನೂ ಪೂರೈಸಿಕೊಂಡಿತ್ತು. ಅಂದಹಾಗೆ ಈ ಚಿತ್ರ ದುನಿಯಾ ಟಾಕೀಸ್ ಲಾಂಛನದಲ್ಲಿ ದುನಿಯಾ ವಿಜಯ್ ಸ್ವತಃ ನಿರ್ಮಾಣ ಮಾಡುತ್ತಿರೋ ಮೊದಲ ಚಿತ್ರ. ಇದೊಂದು ತೆರನಾಗಿ ಜಾನಿ ಮೇರಾ ನಾಮ್ ಚಿತ್ರದ ಮುಂದುವರೆದ ಭಾಗವಿದ್ದಂತೆ. ಈ ಚಿತ್ರದಲ್ಲಿಯೂ ರಂಗಾಯಣ ರಘು ಮತ್ತು ವಿಜಿ ಕಾಂಬಿನೇಷನ್ ಪ್ರಮುಖ ಆಕರ್ಷಣೆ. ಇನ್ನುಳಿದಂತೆ ರಚಿತಾ ರಾಮ್ ವಿಜಯ್ ಜೋಡಿಯಾಗಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.ರಚಿತಾ ರಾಮ್ ಈ ಚಿತ್ರದ ಮೂಲಕ ಮೊದಲ ಸಲ ದುನಿಯಾ ವಿಜಿ ಜೊತೆ ನಟಿಸಿದ್ದಾರೆ. ರಚಿತಾ ಇಲ್ಲಿ ಇಂಗ್ಲಿಷ್ ಮತ್ತು ಕನ್ನಡವನ್ನು ಮಿಕ್ಸ್ ಮಾಡಿ ಮಾತಾಡೋ ವೆಸ್ಟರ್ನ್ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರಂತೆ. ಒಂದು ವಿಶೇಷವಾದ ಹಾಡಿನಲ್ಲಿ ವಿಜಯ್ ದೇಹವನ್ನು ಸಜ್ಜುಗೊಳಿಸಿಕೊಂಡು ನಟಿಸಿದ್ದಾರಂತೆ. ನಿರ್ದೇಶಕ ಪ್ರೀತಂ ಗುಬ್ಬಿ ಕನಸಿನಂತೆ ವಿಶೇಷವಾದ ಸೆಟ್ ಹಾಕಲೆಂದೇ ಒಂದೂವರೆ ಕೋಟಿ ವ್ಯಯಿಸಲಾಗಿತ್ತು. ವಿಜಯ್ ಮತ್ತು ರಂಗಾಯಣ ರಘು ಕಾಂಬಿನೇಷನ್ನು ಈ ಚಿತ್ರದ ಆಕರ್ಷಣೆಗಳಲ್ಲಿ ಮುಖ್ಯ ವಿಚಾರ ಎಂಬುದು ಚಿತ್ರತಂಡದ ಭರವಸೆ. ಇದಲ್ಲದೇ ರಂಗಾಯಣ ರಘು ಮತ್ತು ವಿಜಿ ಎಂಟು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳುತ್ತಿರೋದು ಅಸಲೀ ವಿಶೇಷ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರೋ ಹಾಡುಗಳು ಈಗಾಗಲೇ ಟ್ರೆಂಡ್ ಕ್ರಿಯೇಟ್ ಮಾಡಿದೆ.Sign in to your account
Username or Email Address


Password

 Remember Me


